newsics.com
ಬೀಜಿಂಗ್: ಮುಂದಿನ ದಿನಗಳಲ್ಲಿ ಕೊರೋನಾ ವೈರಸ್ ನ ಹೊಸ ಹೊಸ ಪ್ರಭೇದಗಳು ಸೃಷ್ಟಿಯಾಗಲಿವೆ ಎಂದು ಚೀನಾದ ವೈರಾಣು ತಜ್ಞೆ ಡಾ. ಶಿಂಝೆಗಿಲ್ ಅಭಿಪ್ರಾಯಪಟ್ಟಿದ್ದಾರೆ.
ಕೊರೋನಾ ಮಹಾಮಾರಿಯ ತವರೂರು ಎಂದು ಕುಖ್ಯಾತಿ ಪಡೆದಿರುವ ವುಹಾನ್ ನಲ್ಲಿರುವ ಪ್ರಯೋಗಾಲಯದಲ್ಲಿ ಅವರು ವೈರಾಣು ತಜ್ಞರಾಗಿದ್ದಾರೆ.
ಬ್ಯಾಟ್ ವುಮೆನ್ ಎಂದೇ ಖ್ಯಾತಿ ಪಡೆದಿದ್ದಾರೆ. ಕೊರೋನಾ ರೂಪಾಂತರಿ ತಳಿ ಬಗ್ಗೆ ಆತಂಕ ಪಡಬೇಕಾಗಿಲ್ಲ. ಧೈರ್ಯ ದಿಂದ ಇದನ್ನು ಎದರಿಸಬೇಕಾಗಿದೆ ಎಂದು ಅವರು ಸಲಹೆ ನೀಡಿದ್ದಾರೆ