ಬೀಜಿಂಗ್: ಮಾರಕ ಕೊರೋನಾ ವೈರಸ್ ಚೀನಾದಲ್ಲಿ ಆತಂಕದ ಅಲೆಯನ್ನೇ ಸೃಷ್ಟಿಸಿದೆ. ಈ ಮಾರಕ ವೈರಸ್ ಗೆ ಬಲಿಯಾದವರ ಸಂಖ್ಯೆ ಇದೀಗ 1355ಕ್ಕೆ ತಲುಪಿದೆ. ಇದೇ ವೇಳೆ ವೈರಸ್ ಸೋಂಕು ತಗುಲಿದವರ ಸಂಖ್ಯೆಯಲ್ಲಿ ಕೂಡ ಭಾರೀ ಹೆಚ್ಚಳವಾಗಿದೆ. 60,000 ಮಂದಿಗೆ ಸೋಂಕು ತಗುಲಿದೆ ಎಂದು ವರದಿಯಾಗಿದೆ. ಚೀನಾದ ಆರ್ಥಿಕತೆ ಮೇಲೆ ಕೂಡ ರೋಗ ಪರಿಣಾಮ ಬೀರಿದ್ದು, ಬೆಳವಣಿಗೆ ದರ ಕುಸಿತದ ಭೀತಿ ಎದುರಾಗಿದೆ.