ಬೀಜಿಂಗ್: ಕೊರೋನಾ ವೈರಸ್ ದಾಳಿ ಚೀನಾದಲ್ಲಿ ಆತಂಕವನ್ನು ಸೃಷ್ಟಿಸಿದ್ದು, ರೋಗಕ್ಕೆ ಬಲಿಯಾದವರ ಸಂಖ್ಯೆ 1524ಕ್ಕೆ ಏರಿದೆ. ಹೊಸತಾಗಿ 2641 ಮಂದಿಯಲ್ಲಿ ರೋಗದ ಸೋಂಕು ಪತ್ತೆಯಾಗಿದೆ. ಇದರೊಂದಿಗೆ ಸೋಂಕು ಪೀಡಿತರ ಸಂಖ್ಯೆ 67, 526 ತಲುಪಿದೆ. ಈ ಮಧ್ಯೆ ರೋಗದಿಂದ ಹೆಚ್ಚು ತೊಂದರೆಗೊಳಗಾಗಿರುವ ವುಹಾನ್ ಪ್ರಾಂತ್ಯದ ಜನರು ಎಲ್ಲಿಗೂ ತೆರಳದಂತೆ ಚೀನಾ ನಿರ್ಭಂದ ವಿಧಿಸಿದೆ ಎಂದು ವರದಿಯಾಗಿದೆ.