ಬೀಜಿಂಗ್: ಮಾರಕ ಕೊರೋನಾ ವೈರಸ್ ಗೆ ಚೀನಾದಲ್ಲಿ ಬಲಿಯಾದವರ ಸಂಖ್ಯೆ 2000 ಮೀರಿದೆ. ಸುಮಾರು 40,000ಕ್ಕೂ ಹೆಚ್ಚು ಮಂದಿಗೆ ರೋಗದ ಸೋಂಕು ತಗುಲಿದ್ದು, ಇವರಲ್ಲಿ ಹಲವರ ಸ್ಥಿತಿ ಗಂಭೀರವಾಗಿದೆ. ಮೃತಪಟ್ಟವರ ಕುರಿತಂತೆ ಹೆಚ್ಚಿನ ಮಾಹಿತಿ ನೀಡಲು ಕೂಡ ಚೀನಾ ನಿರಾಕರಿಸಿದೆ. ಇದು ಮೃತರ ಸಂಖ್ಯೆ ಕುರಿತು ಸಂಶಯ ಮೂಡಿಸಿದೆ. ಕೊರೋನಾ ವೈರಸ್ ಚೀನಾದ ಆರ್ಥಿಕತೆ ಮೇಲೂ ಪರಿಣಾಮ ಬೀರಿದ್ದು, ಜಿಡಿಪಿ ಬೆಳವಣಿಗೆ ದರ ಕುಸಿಯುವ ಭೀತಿ ಎದುರಾಗಿದೆ.