ಬೀಜಿಂಗ್: ಕರೋನಾ ವೈರಸ್ ಹಾವಳಿಯಿಂದ ಚೀನಾ ಗಢ ಗಢ ನಡುಗುತ್ತಿದೆ. ರೋಗ ವ್ಯಾಪಕವಾಗಿ ಹರಡುತ್ತಿದ್ದು, ಇದುವರೆಗೆ 350 ಮಂದಿ ಬಲಿಯಾಗಿದ್ದಾರೆ. ಭಾನುವಾರ ಒಂದೇ ದಿನ 56 ಮಂದಿ ಈ ಮಾರಕ ವೈರಸ್ ಗೆ ಬಲಿಯಾಗಿದ್ದಾರೆ. ಇದೀಗ ಫಿಲಿಫೈನ್ಸ್ ಗೆ ಕೂಡ ಕರೋನಾ ವೈರಸ್ ಹಬ್ಬಿದು ಒರ್ವನ ಬಲಿ ಪಡೆದಿದೆ. ಕರೋನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಚೀನಾದಿಂದ ಆಗಮಿಸುವ ಪ್ರವಾಸಿಗರಿಗೆ ಇ ವೀಸಾ ಸೌಲಭ್ಯವನ್ನು ಭಾರತ ಸ್ಥಗಿತಗೊಳಿಸಿದೆ.