ಬೀಜಿಂಗ್: ಮಹಾ ಮಾರಿ ಕೊರೋನಾ ವೈರಸ್ ದಾಳಿಗೆ ಚೀನಾ ತತ್ತರಿಸಿದ್ದು, ಇದೀಗ ಸತ್ತವರ ಸಂಖ್ಯೆ 560ಕ್ಕೆ ಏರಿದೆ. ರೋಗ ನಿಯಂತ್ರಿಸಲು ಚೀನಾ ಎಲ್ಲ ಪ್ರಯತ್ನ ನಡೆಸುತ್ತಿದ್ದರೂ ಅದು ಪರಿಣಾಮಕಾರಿಯಾಗಿಲ್ಲ. ಹೊಸ ಪ್ರದೇಶಗಳಿಗೆ ರೋಗ ಹರಡುತ್ತಿರುವುದು ಸರ್ಕಾರದ ಕಳವಳಕ್ಕೆ ಕಾರಣವಾಗಿದೆ. ಈ ಮಧ್ಯೆ ಚೀನಾಕ್ಕೆ ಅಗತ್ಯವಿರುವ ಎಲ್ಲ ಸಹಕಾರ ನೀಡುವುದಾಗಿ ಅಂತಾರಾಷ್ಟ್ರೀಯ ಸಮುದಾಯ ಭರವಸೆ ನೀಡಿದೆ