ಬೀಜಿಂಗ್: ಮಾರಕ ಕೊರೋನಾ ವೈರಸ್ ದಾಳಿಗೆ ಚೀನಾದಲ್ಲಿ ಬಲಿಯಾದವರ ಸಂಖ್ಯೆ 630 ತಲುಪಿದೆ. ಆದರೆ ರೋಗ ಇನ್ನೂ ಹೆಚ್ಚಿನ ಮಂದಿಯನ್ನು ಬಲಿಪಡೆದಿದ್ದು, ಚೀನಾ ಸರಿಯಾದ ಮಾಹಿತಿ ನೀಡುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಈ ಮಧ್ಯೆ ಉದ್ದೇಶಪೂರ್ವಕವಾಗಿ ಕೊರೋನಾ ವೈರಸ್ ಹರಡುವ ಪ್ರಯತ್ನ ನಡೆಸಿದರೆ ಮರಣ ದಂಡನೆ ಶಿಕ್ಷೆ ಕೂಡ ವಿಧಿಸುವುದಾಗಿ ಚೀನಾದ ಸ್ಛಳೀಯಾಡಳಿತ ಸಂಸ್ಥೆಗಳು ಎಚ್ಚರಿಕೆ ನೀಡಿವೆ. ಆರ್ಥಿಕತೆ ಮೇಲೆ ಕೂಡ ಕೊರೋನಾ ವೈರಸ್ ಪ್ರಭಾವ ಬೀರಿದ್ದು, ಬೆಳವಣಿಗೆ ದರ ಕುಸಿಯುವ ಭೀತಿ ವ್ಯಕ್ತವಾಗಿದೆ.