ಬೀಜಿಂಗ್: ಮಾರಕ ಕೊರೋನಾ ವೈರಸ್ ಗೆ ಚೀನಾದಲ್ಲಿ ಬಲಿಯಾದವರ ಸಂಖ್ಯೆ 1483 ತಲುಪಿದೆ. ಇದು ಅಧಿಕೃತ ಲೆಕ್ಕವಾಗಿದ್ದು, ಸಾವಿನ ಸಂಖ್ಯೆ ಇದಕ್ಕಿಂತ ಎಷ್ಟೊ ಪಟ್ಟು ಜಾಸ್ತಿಯಾಗಿರುವ ಸಾಧ್ಯತೆಗಳಿವೆ. ನಿನ್ನೆ ಒಂದೇ ದಿನ 116 ಮಂದಿ ಸಾವನ್ನಪ್ಪಿದ್ದಾರೆ. ಈ ಮಧ್ಯೆ ಅಮೆರಿಕದಲ್ಲಿ 15 ಮಂದಿಯಲ್ಲಿ ರೋಗ ಲಕ್ಷಣ ಕಂಡು ಬಂದಿದೆ ಎಂದು ವರದಿಯಾಗಿದೆ.