ಬೀಜಿಂಗ್: ಮಾರಕ ಕೊರೋನಾ ವೈರಸ್ ದಾಳಿಗೆ ಚೀನಾ ತತ್ತರಿಸಿದ್ದು, ನಿನ್ನೆ ಒಂದೇ ದಿನ 64 ಮಂದಿ ಸಾವನ್ನಪ್ಪಿದ್ದಾರೆ. ಇದರೊಂದಿಗೆ ಮಾರಕ ವೈರಸ್ ಗೆ ಬಲಿಯಾದವರ ಸಂಖ್ಯೆ 426ಕ್ಕೆ ಏರಿದೆ. ಅತೀ ಹೆಚ್ಚಿನ ಪ್ರಮಾಣದಲ್ಲಿ ವೈರಸ್ ಸೋಂಕು ಕಂಡು ಬಂದಿರುವ ವುಹಾನ್ ಪ್ರಾಂತ್ಯದಲ್ಲಿ ರೋಗ ತಡೆಗಟ್ಟಲು ಚೀನಾ ಹರ ಸಾಹಸ ಪಡುತ್ತಿದೆ. ಇದೇ ವೇಳೆ, ಕೊರೋನಾ ದಾಳಿ ಕುರಿತು ತನಿಖೆ ನಡೆಸಲು ಅಂತಾರಾಷ್ಟ್ರೀಯ ತಂಡದ ಭೇಟಿಗೆ ಚೀನಾ ಅನುಮತಿ ನೀಡಿದೆ. ವಿಶ್ವ ಆರೋಗ್ಯ ಸಂಘಟನೆ ಜೊತೆ ಮಾತುಕತೆ ನಡೆಸಿದ ಬಳಿಕ ಚೀನಾ ಈ ನಿರ್ಧಾರ ಪ್ರಕಟಿಸಿದೆ.