ಬೀಜಿಂಗ್: ಮಾರಣಾಂತಿಕ ಕೊರೊನಾ ವೈರಸ್ಗೆ ಸಾವನ್ನಪ್ಪಿದವರ ಸಂಖ್ಯೆ 30ಕ್ಕೆ ಏರಿದ್ದು, ನೇಪಾಳಕ್ಕೂ ಈ ಸೋಂಕು ಹರಡಿದೆ. ಹೀಗಾಗಿ ಭಾರತ ಕಟ್ಟೆಚ್ಚರ ವಹಿಸಿದೆ. ಕೇರಳ, ಮುಂಬೈನಲ್ಲೂ ಕೊರೋನಾ ವೈರಸ್ ಸೋಂಕು ಪತ್ತೆಯಾಗಿದೆ.
ಈ ಸೋಂಕಿಗೆ ಒಳಗಾದವರ ಸಂಖ್ಯೆ ಚೀನಾದಲ್ಲಿ 830 ರ ಗಡಿದಾಟಿದೆ.
ಚೀನಾದ ವುಹಾನ್ ನಗರದಲ್ಲಿ ಅಧಿಕ ಸಂಖ್ಯೆಯ ಜನ ಈ ಸೋಂಕಿಗೆ ಒಳಗಾಗಿದ್ದು, ಈವರೆಗೆ ಶಂಕಿತ 1,072 ಪ್ರಕರಣ ಪರಿಶೀಲಿಸಲಾಗುತ್ತಿದೆ ಎಂದು ಚೀನಾ ರಾಷ್ಟ್ರೀಯ ಆರೋಗ್ಯ ಆಯೋಗ ತಿಳಿಸಿದೆ.
ಈ ಮಧ್ಯೆ, ವಿಶ್ವ ಆರೋಗ್ಯ ಸಂಸ್ಥೆ ಚೀನಾದ ಪರಿಸ್ಥಿತಿಯನ್ನು ಜಾಗತಿಕ ಆರೋಗ್ಯ ತುರ್ತುಸ್ಥಿತಿ ಎಂದು ಘೋಷಿಸಿದೆ.
ಕೊರೊನಾ ವೈರಸ್; 30 ಕ್ಕೇರಿದ ಸಾವಿನ ಸಂಖ್ಯೆ
Follow Us