ರಿಯಾದ್: ಚೀನಾದಲ್ಲಿ ಹಾಹಾಕಾರವನ್ನೇ ಸೃಷ್ಟಿಸಿರುವ ಮಾರಕ ಕೊರೋನಾ ವೈರಸ್ ಸೌದಿ ಅರೇಬಿಯಾಕ್ಕೂ ವ್ಯಾಪಿಸಿದ್ದು, ಕೇರಳದಲ್ಲಿ ಆತಂಕ ಸೃಷ್ಟಿಯಾಗಿದೆ. ಸೌದಿ ಅರೇಬಿಯಾದ ಹಯಾತ್ ನ್ಯಾಶನಲ್ ಆಸ್ಪತ್ರೆಯಲ್ಲಿನ ಕೇರಳ ಮೂಲದ ನರ್ಸ್ ಗೆ ರೋಗದ ಸೋಂಕು ತಗುಲಿರುವುದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಅಲ್ಲಿ ಸೇವೆ ಸಲ್ಲಿಸುತ್ತಿರುವ 40ಕ್ಕೂ ಹೆಚ್ಚು ನರ್ಸ್ ಗಳನ್ನು ಪ್ರತ್ಯೇಕವಾಗಿರಿಸಿ ವೈದ್ಯಕೀಯ ನಿಗಾದಲ್ಲಿ ಇರಿಸಲಾಗಿದೆ.ಇವರಲ್ಲಿ ಹೆಚ್ಚಿನವರು ಕೇರಳಿಯರಾಗಿದ್ದಾರೆ. ರೋಗಿಗಳ ಆರೈಕೆ ಮಾಡುವುದರಲ್ಲಿ ನರ್ಸ್ ಗಳು ಮೊದಲ ಸಾಲಿನಲ್ಲಿ ಇರುತ್ತಾರೆ. ಇದರಿಂದಾಗಿ ಬಹು ಬೇಗನೆ ಅವರು ರೋಗಕ್ಕೆ ತುತ್ತಾಗುತ್ತಿದ್ದಾರೆ. ಸೌದಿ ಅರೇಬಿಯಾದಲ್ಲಿ ಕೆಲಸ ಮಾಡುವ ನರ್ಸ್ ಗಳ ಪೈಕಿ ಶೇಕಡ 40 ಮಂದಿ ಕೇರಳ ಮೂಲದವರಾಗಿದ್ದು, ಆತಂಕ ಸೃಷ್ಟಿಯಾಗಿದೆ.