Saturday, November 27, 2021

ಉಸಿರಾಟದ ಮೂಲಕವೂ ಕೊರೋನಾ ಸೋಂಕು!

Follow Us

ವಾಷಿಂಗ್ಟನ್: ಮಾರಕ ಕೊರೋನಾ ವೈರಸ್ ಸಹಜ ಉಸಿರಾಟ ಹಾಗೂ ಸಂಭಾಷಣೆಯ ಸಂದರ್ಭದಲ್ಲೂ ಗಾಳಿಯಲ್ಲಿ ಹರಡುವ ಸಾಧ್ಯತೆಯಿದೆಯೆಂದು ಅಮೆರಿಕದ ಖ್ಯಾತ ವಿಜ್ಞಾನಿಯೊಬ್ಬರು ಎಚ್ಚರಿಕೆ ನೀಡಿದ್ದಾರೆ.
ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬರೂ ಮನೆಯಿಂದ ಹೊರಗೆ ಬರುವಾಗ ಮಾಸ್ಕ್‌ ಧರಿಸುವುದನ್ನು ಶಿಫಾರಸು ಮಾಡಬೇಕೆಂದು ಅವರು ಅಮೆರಿಕ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಅಮೆರಿಕದ ರಾಷ್ಟ್ರೀಯ ಆರೋಗ್ಯ ಸಂಸ್ಥೆಯ ಸೋಂಕು ರೋಗ ವಿಭಾಗದ ವರಿಷ್ಠ ಆಂಟೊನಿ ಪೌಸಿ ಅವರು ಶನಿವಾರ ಫಾಕ್ಸ್ ನ್ಯೂಸ್ ಸುದ್ದಿವಾಹಿನಿಗೆ ನೀಡಿದ ಸಂದರ್ಶನದಲ್ಲಿ ಈ ಮಾಹಿತಿ ನೀಡಿದ್ದಾರೆ.
ಕೊರೋನಾ ವೈರಸ್ ಕೆಮ್ಮುವಾಗ ಹಾಗೂ ಸೀನುವಾಗ ಮಾತ್ರವಲ್ಲದೆ ಜನರು ಪರಸ್ಪರ ಮಾತನಾಡುವಾಗಲೂ ಹರಡುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ.
ಈ ಸಂಶೋನಾ ವರದಿಯನ್ನು ಗಂಭೀರವಾಗಿ ಪರಿಗಣಿಸಿರುವ ಟ್ರಂಪ್ ಸರ್ಕಾರ, ಮನೆಯಿಂದ ಹೊರಗೆ ಹೋಗುವಾಗ ಮಾಸ್ಕ್‌ಗಳನ್ನು ಧರಿಸಬೇಕೆಂದು ತನ್ನ ಪ್ರಜೆಗಳಿಗೆ ಸಲಹೆ ನೀಡಿದೆ.

ಮತ್ತಷ್ಟು ಸುದ್ದಿಗಳು

Latest News

ಡಿಸೆಂಬರ್ 6ರಂದು ರಷ್ಯಾ ಅಧ್ಯಕ್ಷ ಪುತಿನ್ ಭಾರತಕ್ಕೆ ಭೇಟಿ

newsics.com ನವದೆಹಲಿ: ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್  ಡಿಸೆಂಬರ್ 6ರಂದು ಭಾರತಕ್ಕೆ ಭೇಟಿ ನೀಡಲಿದ್ದಾರೆ. ಭಾರತ ಮತ್ತು ರಷ್ಯಾ ಶೃಂಗಸಭೆಯಲ್ಲಿ ಅವರು ಭಾಗವಹಿಸಲಿದ್ದಾರೆ. ಭಾರತ ಪ್ರವಾಸದ ವೇಳೆ ಪುತಿನ್,...

ರೈತರ ಪಂಪ್ ಸೆಟ್ ಗಳಿಗೆ ಸೌರ ವಿದ್ಯುತ್: ರಾಜ್ಯದ ಚಿಂತನೆ

newsics.com ಬೆಂಗಳೂರು: ಜಲ ಮೂಲಗಳಿಂದ ಸಾಕಷ್ಟು ವಿದ್ಯುತ್ ಲಭಿಸದ ಕಾರಣ ಸೌರ ವಿದ್ಯುತ್ ಘಟಕಗಳಿಂದ ರೈತರ ಪಂಪ್ ಸೆಟ್ ಗಳಿಗೆ ವಿದ್ಯುತ್ ಪೂರೈಸಲು ರಾಜ್ಯ ಸರ್ಕಾರ ಮುಂದಾಗಿದೆ. ಈ ಸಂಬಂಧ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ...

ನಕ್ಸಲ್ ಮುಖಂಡ ಮಡ್ವಿ ಭೀಮಾ ಎನ್ ಕೌಂಟರ್

newsics.com ರಾಯ್ ಪುರ: ನಕ್ಸಲ್ ಸಂಘಟನೆಯಲ್ಲಿ ಸಕ್ರಿಯನಾಗಿದ್ದ ಮಡ್ವಿ ಭೀಮಾ , ಭದ್ರತಾಪಡೆ ನಡೆಸಿದ ಕಾರ್ಯಾಚರಣೆಯಲ್ಲಿ ಹತನಾಗಿದ್ದಾನೆ.  ಛತ್ತೀಸ್ ಘಡದ ಸುಕ್ಮಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಹಲವು ಪ್ರಕರಣಗಳಲ್ಲಿ ಭೀಮಾ ಆರೋಪಿಯಾಗಿದ್ದ ಎಂದು ಪೊಲೀಸರು...
- Advertisement -
error: Content is protected !!