Thursday, October 29, 2020

ಪಾಕ್’ನಲ್ಲಿ 500 ವೈದ್ಯ, 40 ಮಾಧ್ಯಮ ಸಿಬ್ಬಂದಿಗೆ ಕೊರೋನಾ ಸೋಂಕು

ಲಾಹೋರ್: ಕೊರೋನಾ ವೈರಸ್ ಪಾಕಿಸ್ತಾನದಲ್ಲೂ ವ್ಯಾಪಕವಾಗಿ ಹರಡುತ್ತಿದ್ದು, ಸುಮಾರು 500 ವೈದ್ಯಕೀಯ ಸಿಬ್ಬಂದಿ ಹಾಗೂ 40 ಪತ್ರಕರ್ತರಲ್ಲಿ ಕೊರೋನಾ ಸೋಂಕು ದೃಢಪಟ್ಟಿದೆ.
ಪಾಕಿಸ್ತಾನ ಸರ್ಕಾರದ ವರದಿಯ ಪ್ರಕಾರ, 250 ವೈದ್ಯರು ಹಾಗೂ 110 ನರ್ಸ್ ಗಳು ಸೇರಿದಂತೆ 503 ವೈದ್ಯಕೀಯ ಸಿಬ್ಬಂದಿಗೆ ಕೊರೋನಾ ಪಾಸಿಟಿವ್ ಬಂದಿದ್ದು, ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರಲ್ಲಿ ಬಹುತೇಕರು ಪಂಜಾಬ್ ಪ್ರಾಂತ್ಯಕ್ಕೆ ಸೇರಿದವರಾಗಿದ್ದಾರೆ.
ಈವರೆಗೆ ಐವರು ವೈದ್ಯರು ಸೇರಿ 13 ವೈದ್ಯಕೀಯ ಸಿಬ್ಬಂದಿ ಕೊರೋನಾ ವೈರಸ್ ಗೆ ಬಲಿಯಾಗಿದ್ದಾರೆ. ಪಾಕಿಸ್ತಾನದಲ್ಲಿ ಒಟ್ಟೂ 20,084 ಮಂದಿಗೆ ಕೊರೋನಾ ಸೋಂಕು ತಗುಲಿದೆ.

ಮತ್ತಷ್ಟು ಸುದ್ದಿಗಳು

Latest News

ಒಂದೇ ದಿನ 49,881 ಮಂದಿಗೆ ಕೊರೋನಾ ಸೋಂಕು,517 ಬಲಿ

Newsics.com ನವದೆಹಲಿ: ದೇಶದಲ್ಲಿ  ಕೊರೋನಾದ ಅಬ್ಬರ ಮುಂದುವರಿದಿದೆ. ಕಳೆದ 24 ಗಂಟೆಯಲ್ಲಿ  49,881 ಮಂದಿಯಲ್ಲಿ  ಕೊರೋನಾ ಸೋಂಕು  ಕಂಡು ಬಂದಿದೆ. ಕೊರೋನಾ ಸೋಂಕಿತರ ಸಂಖ್ಯೆ    80, 40,...

ನೀರಿನಲ್ಲಿ ಕೊಚ್ಚಿ ಹೋದ ಆರು ಬಾಲಕರು, ಮೂರು ಶವಪತ್ತೆ

Newsics.com ವಿಜಯವಾಡ: ಆಂಧ್ರಪ್ರದೇಶದ  ಪಶ್ಚಿಮ ಗೋದಾವರಿ ಜಿಲ್ಲೆಯ  ವಸಂತವಾಡ ಗ್ರಾಮದಲ್ಲಿ ಭಾರೀ ದುರಂತ ಸಂಭವಿಸಿದೆ.  ಆರು ಮಕ್ಕಳು ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ಹಳ್ಳದಲ್ಲಿ ಆಟವಾಡುತ್ತಿದ್ದ ವೇಳೆ ಈ ಮಕ್ಕಳು ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ಮೂರು...

ವೈದ್ಯರ ಅಪಹರಿಸಿ 10 ಕೋಟಿ ರೂಪಾಯಿಗೆ ಬೇಡಿಕೆ: ಏಳು ಆರೋಪಿಗಳ ಬಂಧನ

Newsics.com ಹೈದರಾಬಾದ್:  ನಗರದ ದಂತ ವೈದ್ಯರ ಅಪಹರಣ ಪ್ರಕರಣ ಸುಖಾಂತ್ಯ ಕಂಡಿದೆ.  ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ  ಸೈಬರಬಾದ್ ಪೊಲೀಸ್ ಆಯುಕ್ತ ವಿ ಸಿ. ಸಜ್ಜನರ್  ನೇತೃತ್ವದ ತಂಡ ಏಳು ಮಂದಿಯನ್ನು ಬಂಧಿಸಿದೆ. ಬಂಧಿತರಲ್ಲಿ ಉಡುಪಿ...
- Advertisement -
- Advertisement -
error: Content is protected !!