ಬೀಜಿಂಗ್; ಕೋವಿದ್ -19 ಸೋಂಕು ಚೀನಾದ ವುಹಾನ್ ವೈರಾಲಜಿ ಸಂಸ್ಥೆಯಿಂದ ಅಚಾನಕ್ಕಾಗಿ ಸೋರಿಕೆಯಾಗಿದೆ ಎಂಬ ವದಂತಿಯನ್ನು ತಳ್ಳಿ ಹಾಕಿರುವ ಭಾರತದ ಚೀನಾ ರಾಯಭಾರಿ ಸುನ್ ವಿಯೋಡಂಗ್, ಅದು ಹರಡಿರುವುದು ಸಮುದ್ರದ ಜಲಚರ ಮಾರುಕಟ್ಟೆ ಆಹಾರದಿಂದ ಎಂದು ಸ್ಪಷ್ಟಪಡಿಸಿದ್ದಾರೆ.
ಸೋಂಕು ಮಾನವ ನಿರ್ಮಿತವಲ್ಲ, ನೈಸರ್ಗಿಕವಾಗಿ ಹರಡಿರುವುದು ಎಂದಿರುವ ಅವರು, ಈ ಸೋಂಕು ಎಷ್ಟು ಭಯಾನಕವೋ, ಅದರ ಬಗ್ಗೆ ಹರಡುವ ವದಂತಿಗಳು ಇನ್ನೂ ಭಯಾನಕ ಎಂದಿದ್ದಾರೆ.