ಇಸ್ಲಾಮಾಬಾದ್: ಭ್ರಷ್ಟಾಚಾರದ ಆರೋಪಕ್ಕೆ ಗುರಿಯಾಗಿರುವ ಕ್ರಿಕೆಟಿಗ ಉಮರ್ ಅಕ್ಮಲ್ ಗೆ ಪಾಕಿಸ್ತಾನ ಕ್ರಿಕೆಟ್ ಆಡಳಿತ ಮಂಡಳಿ ನಿಷೇಧ ಹೇರಿದೆ. ಈ ಸಂಬಂಧ ತನಿಖೆ ನಡೆಸಲಾಗುತ್ತಿದೆ. ವರದಿ ಕೈ ಸೇರಿ ದೋಷಮುಕ್ತವಾಗುವ ತನಕ ನಿಷೇಧ ಮುಂದುವರಿಯಲಿದೆ ಪಾಕ್ ಕ್ರಿಕೆಟ್ ಸಂಸ್ಶೆ ಹೇಳಿದೆ. ಕ್ರಿಕೆಟ್ ಕ್ರೀಡೆಗೆ ಕಳಂಕ ತರುವ ಯಾವುದೇ ಕೃತ್ಯವನ್ನು ಸಹಿಸುವುದಿಲ್ಲ ಎಂದಿರುವ ಕ್ರಿಕೆಟ್ ಸಂಸ್ಥೆ, ಕಳಂಕಿತರ ವಿರುದ್ಧ ಕಠಿಣ ಕ್ರಮದ ಎಚ್ಚರಿಕೆ ಕೂಡ ನೀಡಿದೆ