newsics.com
ವಾಷಿಂಗ್ಟನ್: ಅಮೆರಿಕದ ನ್ಯಾಯಾಲಯವೊಂದು ಎಚ್-1ಬಿ ವೀಸಾವನ್ನು ತಾತ್ಕಾಲಿಕವಾಗಿ ರದ್ದುಗೊಳಿಸಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನಿರ್ಧಾರವನ್ನು ಎತ್ತಿಹಿಡಿದಿದೆ.
ಇದರಿಂದಾಗಿ ಭಾರತೀಯ ಉದ್ಯೋಗಿಗಳಿಗೆ ನ್ಯಾಯಾಲಯದಲ್ಲೂ ಹಿನ್ನಡೆ ಉಂಟಾಗಿದೆ. ಡಿಎಸ್-160 ವೀಸಾ ಅರ್ಜಿಯ ಪ್ರಕ್ರಿಯೆ ಆರಂಭಿಸಲು ಅರ್ಜಿದಾರರು ಕೋರಿದ್ದಾರೆ. ಆದರೆ 2021ರ ಜ.1ರವರೆಗೆ ಅರ್ಜಿದಾರರು ಅಮೆರಿಕಕ್ಕೆ ಪ್ರವೇಶಿಸಲು ಅರ್ಹರಾಗಿಲ್ಲ. ಹೀಗಾಗಿ ಡಿಎಸ್-160 ಅರ್ಜಿಯ ಪ್ರಕ್ರಿಯೆ ಆರಂಭಿಸಿದರೂ, ಪ್ರಯೋಜನವಿಲ್ಲ ಎಂದು ಕೊಲಂಬಿಯಾ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರಾದ ಅಮಿತ್ ಪಿ.ಮೆಹ್ತಾ ಹೇಳಿದ್ದಾರೆ.
ನವಾಜ್ ಷರೀಫ್ ಬಂಧನಕ್ಕೆ ಪಾಕ್ ಸರ್ಕಾರ ವಾರಂಟ್
ಎಚ್-1ಬಿ ವೀಸಾದಡಿ ವಿದೇಶಿಗರು ವರ್ಷಾಂತ್ಯದವರೆಗೆ ಅಮೆರಿಕಕ್ಕೆ ಪ್ರವೇಶಿಸುವುದನ್ನು ನಿಷೇಧಿಸಿ ಆದೇಶ ಹೊರಡಲಿಸಲಾಗಿತ್ತು. ಇದನ್ನು ಪ್ರಶ್ನಿಸಿ 169 ಭಾರತೀಯ ನಾಗರಿಕರು ನ್ಯಾಯಾಲಯದ ಮೆಟ್ಟಿಲೇರಿದ್ದರು. ವಿದೇಶಿ ಪರಿಣತ ಕೆಲಸಗಾರರು ಅಮೆರಿಕದಲ್ಲಿ ತಾತ್ಕಾಲಿಕವಾಗಿ ಕಾರ್ಯನಿರ್ವಹಿಸಲು ಅವಕಾಶವನ್ನು ಎಚ್-1ಬಿ ವೀಸಾ ನೀಡುತ್ತದೆ. ಭಾರತ ಮತ್ತು ಚೀನಾ ಸೇರಿದಂತೆ ಹಲವು ರಾಷ್ಟ್ರಗಳಿಂದ ಸಾವಿರಾರು ಉದ್ಯೋಗಿಗಳನ್ನು ಆಯ್ಕೆ ಮಾಡಿಕೊಳ್ಳಲು ಈ ವೀಸಾವನ್ನೇ ಹಲವು ಕಂಪನಿಗಳು ಅವಲಂಬಿಸಿವೆ.
ಚೀನಾದಲ್ಲಿ ಹೊಸ ವೈರಸ್: ಪುರುಷರನ್ನು ನಪುಂಸಕರನ್ನಾಗಿ ಮಾಡುತ್ತಿದೆ ಸೂಕ್ಷ್ಮ ಜೀವಿ
ಈರುಳ್ಳಿ ರಫ್ತಿನ ಮೇಲೆ ಭಾರತ ನಿಷೇಧ: ಬಾಂಗ್ಲಾ ಕಿಡಿ ಕಿಡಿ
ರಾಜ್ಯದಲ್ಲಿ ಸೆ.21ರಿಂದ ಶಾಲೆ ಮಾತ್ರ ಓಪನ್, ಕ್ಲಾಸ್ ಇರಲ್ಲ