newsics.com
ಹಾಂಕಾಂಗ್: ಸಾಕು ಪ್ರಾಣಿಗಳ ಅಂಗಡಿಯ ಮಾಲಿಕನೊಬ್ಬನಿಗೆ ಕೋವಿಡ್ ಸೋಂಕು ತಗುಲಿರುವ ಹಿನ್ನೆಲೆಯಲ್ಲಿ ಅಂಗಡಿಯಲ್ಲಿ ಮಾರಾಟಕ್ಕೆ ಇಟ್ಟಿದ್ದ 2000 ಪುಟ್ಟ ಪ್ರಾಣಿಗಳನ್ನು ಸಾಯಿಸುವಂತೆ ಹಾಂಕಾಂಗ್ ಆಡಳಿತ ಆದೇಶ ಪ್ರಕಟಿಸಿದೆ.
ಹಾಂಕಾಂಗ್ ನಗರದಲ್ಲಿ ಹ್ಯಾಮ್ಸ್ಟರ್ ಹಾಗೂ ಇತರ ಸಾಕು ಪ್ರಾಣಿಗಳ ಆಮದನ್ನು ಕೂಡಾ ನಿಷೇಧಿಸುವುದಾಗಿ ಕೃಷಿ, ಮೀನುಗಾರಿಕೆ ಹಾಗೂ ಸಂರಕ್ಷಣಾ ಇಲಾಖೆ ತಿಳಿಸಿದೆ.
ಸಾಕು ಪ್ರಾಣಿ ಅಂಗಡಿಯ ಮಾಲೀಕನಿಗೆ ಸೋಮವಾರ ಕೋವಿಡ್ ಪರೀಕ್ಷೆಯಲ್ಲಿ ಡೆಲ್ಟಾ ರೂಪಾಂತರಿ ಪತ್ತೆಯಾಗಿತ್ತು. ನಂತರ ಆತನ ಅಂಗಡಿಯಲ್ಲಿದ್ದ ನೆದರ್ಲ್ಯಾಂಡ್ನಿಂದ ಆಮದು ಮಾಡಿಕೊಂಡಿದ್ದ ಹಲವಾರು ಪುಟ್ಟ ಪ್ರಾಣಿಗಳಲ್ಲೂ ಸೋಂಕು ಪತ್ತೆಯಾಗಿದೆ.