ಆ.10ಕ್ಕೆ ಕೋವಿಡ್ ಲಸಿಕೆ; ರಷ್ಯಾ ಘೋಷಣೆ

ಮಾಸ್ಕೋ: ಕೊರೋನಾ ಸೋಂಕು ಪ್ರಕರಣಗಳು ಹೆಚ್ಚುತ್ತಿರುವ ನಡುವೆಯೇ ರಷ್ಯಾ ಆ.10ಕ್ಕೆ ಕೋವಿಡ್ 19 ಲಸಿಕೆಯ ಬಗ್ಗೆ ಘೋಷಣೆ ಮಾಡುವುದಾಗಿ ಹೇಳಿದೆ.ಮಾಸ್ಕೋದ ಗಮಾಲೆಯ ಇನ್‌ಸ್ಟಿಟ್ಯೂಟ್‌ ಈ ಲಸಿಕೆ ಅಭಿವೃದ್ಧಿಪಡಿಸಿದೆ. ಇದು ಸಾಧ್ಯವಾದರೆ ಸರ್ಕಾರವೊಂದು ಘೋಷಿಸಿದ ಜಗತ್ತಿನ ಮೊದಲ ಲಸಿಕೆಯಾಗಲಿದೆ.ಆರಂಭದಲ್ಲಿ ಆರೋಗ್ಯ ಕಾರ್ಯಕರ್ತರು ಈ ಲಸಿಕೆಯನ್ನು ಪಡೆಯಲಿದ್ದಾರೆ. ಈಗಾಗಲೇ ಒಂದು ಸುತ್ತಿನ ಪ್ರಯೋಗ ಮುಗಿದು ಉತ್ತಮ ಫ‌ಲಿತಾಂಶ ಬಂದಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 2ನೇ ಸುತ್ತು ಶೀಘ್ರ ಆರಂಭವಾಗಲಿದೆ ಎಂದು ರಷ್ಯಾ ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ.