ಧರ್ಮಶಾಲಾ: ವಿಶ್ವಾದ್ಯಂತ ವ್ಯಾಪಿಸುತ್ತಿರುವ ಮಾರಣಾಂತಿಕ ಕರೊನಾ ವೈರಸ್ ಸೋಂಕು ತಡೆಗಟ್ಟಲು ಮಂತ್ರಗಳನ್ನು ಪಠಿಸುವಂತೆ ಚೈನಾದಲ್ಲಿರುವ ತಮ್ಮ ಅನುಯಾಯಿಗಳಿಗೆ ಟಿಬೆಟ್ಟಿಯನ್ನರ ಆಧ್ಯಾತ್ಮಿಕ ಗುರು ದಲಾಯಿ ಲಾಮಾ ಸೂಚನೆ ನೀಡಿದ್ದಾರೆ.
ಮಾರಾಣಂತಿಕ ವೈರಾಣು ತಡೆಗೆ ಫೇಸ್ ಬುಕ್ ನಲ್ಲಿ ಸಲಹೆ ಕೋರಿದ್ದ ಭಕ್ತರಿಗೆ ಉತ್ತರಿಸಿರುವ ದಲಾಯಿ ಲಾಮಾ, “ತಾರಾ ಮಂತ್ರ” ಪಠಿಸುವುದರಿಂದ ವೈರಸ್ ಹರಡುವುದನ್ನು ತಡೆಯಲು ಸಾಧ್ಯ ಎಂದಿದ್ದಾರೆ. ಜೊತೆಗೆ, ತಮ್ಮ ಪೇಜ್ ನಲ್ಲಿ ಸ್ವತಃ ’ಓಂ ತಾರೆ ತುತ್ತಾರೆ ತುರೆ ಸೋಹೊ ’ ಎಂಬ ಮಂತ್ರ ಪಠಿಸುವ ಆಡಿಯೊ ಕ್ಲಿಪ್ ಅನ್ನು ಲಗತ್ತಿಸಿದ್ದಾರೆ.