newsics.com
ವಾಷಿಂಗ್ಟನ್: ಕೊರೋನಾದಿಂದ ಮಕ್ಕಳ ಆರೋಗ್ಯ ಮತ್ತು ಶೈಕ್ಷಣಿಕ ಪ್ರಗತಿಗೆ ಹಾನಿಯಾಗುವ ಭೀತಿ ಸೃಷ್ಟಿಯಾಗಿದೆ ಎಂದು ವಿಶ್ವಬ್ಯಾಂಕ್ ಹೇಳಿದೆ.
ಕೊರೋನಾದ ಅಡ್ಡಪರಿಣಾಮ ಅತಿಹೆಚ್ಚಿನ ಪ್ರಮಾಣದಲ್ಲಿ ಬಡ ದೇಶಗಳನ್ನು ಕಾಡಲಿದೆ ಎಂದು ವಿಶ್ವಬ್ಯಾಂಕ್ ಎಚ್ಚರಿಸಿದೆ.
ಕಳೆದ ದಶಕದಲ್ಲಿ ಮಕ್ಕಳ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಬಡ ದೇಶಗಳಲ್ಲಿ ಸಾಧಿಸಲಾಗಿರುವ ಪ್ರಗತಿಯನ್ನು ಅಳಿಸಿಹಾಕುವ ಬೆದರಿಕೆಯನ್ನು ಕೊರೋನಾ ಸೃಷ್ಟಿಸಿದೆ ಎಂದು ವಿಶ್ವಬ್ಯಾಂಕ್ ಆತಂಕ ವ್ಯಕ್ತಪಡಿಸಿದೆ.
ವಿಶ್ವಬ್ಯಾಂಕ್‌ನ 2020ರ ಮಾನವ ಬಂಡವಾಳ ಸೂಚ್ಯಂಕದಲ್ಲಿ ಈ ವಿಷಯ ಪ್ರಸ್ತಾಪಿಸಿದೆ. ಈ ಸೂಚ್ಯಂಕವು, ಶಾಲೆ ಮತ್ತು ಆರೋಗ್ಯರಕ್ಷಣೆ ಕ್ಷೇತ್ರಗಳಿಗೆ ಒತ್ತುಕೊಟ್ಟು, ಮಕ್ಕಳು ಭವಿಷ್ಯಕ್ಕಾಗಿ ಯಾವ ರೀತಿಯಲ್ಲಿ ಸಿದ್ಧಗೊಂಡಿದ್ದಾರೆ ಎಂಬುದರ ಆಧಾರದಲ್ಲಿ ದೇಶಗಳಿಗೆ ಸ್ಥಾನಗಳನ್ನು ನೀಡುತ್ತದೆ.
ನೀವಿನ್ನು ನಿಮ್ಮ ವಾಚ್ ಮೂಲಕವೇ ಶಾಪಿಂಗ್ ಮಾಡಬಹುದು…!
ಜಾಗತಿಕ ಸ್ಮಾರ್ಟ್ ಸಿಟಿ; ಭಾರತಕ್ಕೆ ಭಾರೀ ಹಿನ್ನಡೆ, ಸಿಂಗಾಪುರ ಶೈನ್