newsics.com
ನ್ಯೂಯಾರ್ಕ್: ಓಹಿಯೋದ 23 ವರ್ಷದ ಮಗಳೊಬ್ಬಳು ತನ್ನ ತಾಯಿಗೆ ಕಬ್ಬಿಣದ ಬಾಣಲೆಯಿಂದ ಹೊಡೆದು, ಕುತ್ತಿಗೆಗೆ 30 ಬಾರಿ ಚಾಕುವಿನಿಂದ ಚುಚ್ಚಿ ಕೊಂದ ಆಘಾತಕಾರಿ ಘಟನೆಯೊಂದು ಅಮೆರಿಕಾದಲ್ಲಿ ನಡೆದಿದೆ.
ಮೃತಳನ್ನು ಬ್ರೆಂಡಾ ಪೋವೆಲ್(50) ಎಂದು ಗುರುತಿಸಲಾಗಿದೆ. ಸಿಡ್ನಿ ಪೋವೆಲ್, ತಾಯಿಯನ್ನು ಕೊಂದ ಪಾಪಿ ಮಗಳು. ತಾನು ಕಾಲೇಜಿನಿಂದ
ಹೊರಹಾಕಲ್ಪಟ್ಟಿದ್ದಳು. ಈ ವಿಚಾರ ಬ್ರೆಂಡಾಗೆ ತಿಳಿದಿದೆ. ಹೀಗಾಗಿ ಈ ವಿಚಾರ ಸಂಬಂಧ ತಾಯಿ ತನ್ನ ಮಗಳನ್ನು ಪ್ರಶ್ನೆ ಮಾಡಿದ್ದಾಳೆ. ಇದರಿಂದ ಸಿಟ್ಟಿಗೆದ್ದ ಮಗಳಿಂದ ಈ ಕೊಲೆ ನಡೆದಿದೆ ಎಂಬುದಾಗಿ ವರದಿಯಾಗಿದೆ.
2020ರ ಮಾರ್ಚಿನಲ್ಲಿ ಸಿಡ್ನಿ ಪೋವೆಲ್ ರಾಡ್ ನಿಂದ ಬ್ರೆಂಡಾ ಪೋವೆಲ್ ಅವರ ತಲೆಗೆ ಹೊಡೆದಿದ್ದಾಳೆ. ನಂತರ ಕುತ್ತಿಗೆಗೆ ಸುಮಾರು 30 ಬಾರಿ ಇರಿದಿದ್ದಾರೆ ಎಂದು ಸಮ್ಮಿಟ್ ಕೌಂಟಿ ಪ್ರಾಸಿಕ್ಯೂಟರ್ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.
ಮೌಂಟ್ ಯೂನಿಯನ್ ಯೂನಿವರ್ಸಿಟಿಯ ಹಳೆಯ ವಿದ್ಯಾರ್ಥಿನಿ ಪೋವೆಲ್ ಅನ್ನು ತಪ್ಪಿತಸ್ಥೆ ಎಂದು ಕೋರ್ಟ್ ಘೋಷಿಸಿದೆ. ಸೆಪ್ಟೆಂಬರ್ 28ರಂದು ಸಿಡ್ನಿ ಪೋವೆಲ್ ಶಿಕ್ಷೆಯನ್ನು ಕೋರ್ಟ್ ಪ್ರಕಟಿಸಲಿದೆ.
ಇತಿಹಾಸದಲ್ಲೇ ಮೊದಲ ಬಾರಿಗೆ ಸುಪ್ರೀಂ ಕೋರ್ಟಿನಲ್ಲಿ ವಾದ ಮಂಡಿಸಿದ ಕರ್ನಾಟಕ ಮೂಲದ ಮೂಕ ವಕೀಲೆ!
ಗರ್ಭಿಣಿ ಸೊಸೆ ತಡವಾಗಿ ಏಳುತ್ತಾಳೆಂದು ಶುರುವಾದ ಗಲಾಟೆ: ಡಬಲ್ ಮರ್ಡರ್ ಮಾಡಿದ ಮಾವ!