newsics.com
ಫ್ರಾನ್ಸ್ : ಮೇ 17 ರಿಂದ 28ರವರೆಗೆ ಪ್ರಾನ್ಸ್ ನಲ್ಲಿ ನಡೆದ ಪ್ರತಿಷ್ಠಿತ Cannes ಚಲನಚಿತ್ರೋತ್ಸವದಲ್ಲಿ ವಿವಿಧ ದೇಶದ ತಾರೆಯರು ರೆಡ್ ಕಾರ್ಪೆಟ್ ನಲ್ಲಿ ಹೆಜ್ಜೆ ಹಾಕಿದ್ದಾರೆ.
ಈ ಕಾರ್ಯಕ್ರಮದಲ್ಲಿ ಜ್ಯೂರಿ ಆಗಿ ಸ್ಥಾನ ಪಡೆದಿದ್ದ ಕನ್ನಡತಿ, ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ದಿನಕ್ಕೊಂದು ಡ್ರೆಸ್ ನಲ್ಲಿ ಗಮನ ಸೆಳೆದಿದ್ದಾರೆ.
ಅದರಲ್ಲೂ Cannes ಚಲನಚಿತ್ರೋತ್ಸವದ ಕೊನೆಯ ದಿನದಂದು ಧರಿಸಿದ್ದ ಶ್ವೇತವರ್ಣದ ಸೀರೆಯಲ್ಲಿ ಗಮನ ಸೆಳೆದಿದ್ದಾರೆ. ಅದಕ್ಕೆ ಒಪ್ಪುವಂತಹ ಮುತ್ತಿನ ಮಾಲೆ ಆಕೆಯ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿದ್ದು, ಅವರ ಲುಕ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.