newsics.com
ಬೀಜಿಂಗ್: ಚೀನಾದಲ್ಲಿ ಕೊರೋನಾ ರೂಪಾಂತರಿ ತಳಿ ಡೆಲ್ಟಾ ಹಾವಳಿ ತೀವ್ರಗೊಂಡಿದೆ. ಇದು ವ್ಯಾಪಕವಾಗಿ ಹರಡುವುದನ್ನು ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲಾಗುತ್ತಿದೆ.
ಮುಖ್ಯವಾಗಿ ಜನರನ್ನು ಅವರ ಮನೆಗಳಲ್ಲಿ ಬಂಧಿಗಳಂತೆ ಇರಿಸಲಾಗುತ್ತಿದೆ. ಮನೆ ಬಿಟ್ಟು ಹೊರಗಡೆ ಬರುವುದನ್ನು ತ಼ಡೆಗಟ್ಟಲು ಬಾಗಿಲ ಬಳಿ ಕಬ್ಬಿಣದ ಸರಳುಗಳನ್ನು ಇರಿಸಲಾಗಿದೆ.
ಮನೆ ಮನೆಗೆ ಭೇಟಿ ನೀಡುತ್ತಿರುವ ಆರೋಗ್ಯ ಕಾರ್ಯಕರ್ತರು ಎಲ್ಲ ನಿಯಮ ಕಟ್ಟುನಿಟ್ಟಾಗಿ ಪಾಲಿಸುತ್ತಿರುವುದನ್ನು ಖಾತರಿಪಡಿಸುತ್ತಿದ್ದಾರೆ.
ಅಧಿಕಾರಿಗಳು ಮನೆ ಮನೆಗೆ ತೆರಳಿ ಕಬ್ಬಿಣದ ಸರಳುಗಳನ್ನು ಇರಿಸಿ ಜನರ ಮೇಲೆ ನಿರ್ಬಂಧ ವಿಧಿಸುತ್ತಿರುವ ಚಿತ್ರಗಳು ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿದೆ.