Wednesday, November 30, 2022

ಆಲ್ಫಾಗಿಂತ ಡೆಲ್ಟಾ ರೂಪಾಂತರದ ಹರಡುವಿಕೆ ವೇಗ ಶೇ.60 ಹೆಚ್ಚಳ!

Follow Us

newsics.com

ಲಂಡನ್: ಡೆಲ್ಟಾ ರೂಪಾಂತರ ಆಲ್ಫಾಗಿಂತ ಶೇ.60ರಷ್ಟು ವೇಗವಾಗಿ ಹರಡಬಲ್ಲದು ಎಂದು ಬ್ರಿಟನ್ ತಜ್ಞರು ವರದಿ ಬಹಿರಂಗಪಡಿಸಿದ್ದಾರೆ.
ಭಾರತದಲ್ಲಿ ಮೊದಲು ಗುರುತಿಸಲ್ಪಟ್ಟ ಕೋವಿಡ್-19ನ ಡೆಲ್ಟಾ ರೂಪಾಂತರ ಅಥವಾ B1.617.2 ಕಳವಳಕಾರಿ ವೈರಸ್ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಬ್ರಿಟನ್‌ನಲ್ಲಿ ದೃಢಪಡುತ್ತಿರುವ ಹೊಸ ಕೋವಿಡ್ ಪ್ರಕರಣಗಳಲ್ಲಿ ಶೇ.90ರಷ್ಟು ಪ್ರಕರಣಗಳು ಡೆಲ್ಟಾ ರೂಪಾಂತರದಿಂದ ಆಗಿವೆ. ಆಲ್ಫಾ ವಿಒಸಿಗೆ ಹೋಲಿಸಿದರೆ ಗಮನಾರ್ಹವಾಗಿ ಹೆಚ್ಚಿನ ಸೋಂಕಿನ ದರವನ್ನು ತೋರಿಸುತ್ತಲೇ ಇದೆ ಎಂದು ತಿಳಿಸಿದೆ.

ಆಲ್ಫಾಕ್ಕೆ ಹೋಲಿಸಿದರೆ ಡೆಲ್ಟಾ ರೂಪಾಂತರವು ಲಸಿಕೆ ಪರಿಣಾಮಕಾರಿತ್ವವನ್ನು ಕಡಿಮೆ ಮಾಡುತ್ತದೆ ಎಂಬ ಬಗ್ಗೆ ಇಂಗ್ಲೆಂಡ್ ಮತ್ತು ಸ್ಕಾಟ್ಲೆಂಡ್‌ನಿಂದ ವಿಶ್ಲೇಷಣೆಗಳಿವೆ. ಒಂದು ಡೋಸ್ ನಂತರ ಸೋಂಕು ತಗುಲಿದರೆ ಸರಿಸುಮಾರು 15ರಿಂದ 20 ಪ್ರತಿಶತದಷ್ಟು ಲಸಿಕೆ ಪರಿಣಾಮಕಾರಿತ್ವ ಕುಗ್ಗಿಸುತ್ತದೆ ಎಂದು ಅದರ ಅಪಾಯದ ಮೌಲ್ಯಮಾಪನ ವಿಶ್ಲೇಷಣೆ ಹೇಳುತ್ತದೆ.

ಡೆಲ್ಟಾ ರೂಪಾಂತರವು ಈಗ ಇಂಗ್ಲೆಂಡ್‌ನಲ್ಲಿ ಹೆಚ್ಚಿನ ಸಂಖ್ಯೆಯ ಹೊಸ ಪ್ರಕರಣಗಳಿಗೆ ಕಾರಣವಾಗಿದೆ ಎಂದು ಹೇಳಲಾಗಿದೆ.

ಮತ್ತಷ್ಟು ಸುದ್ದಿಗಳು

vertical

Latest News

ಕೇಂದ್ರ ಜಲ ಆಯೋಗದ ಅಧ್ಯಕ್ಷರಾಗಿ ಚಂದ್ರಶೇಖರ್ ಅಯ್ಯರ್

newsics.com ನವದೆಹಲಿ: ಜಲ ತಜ್ಞ ಚಂದ್ರಶೇಖರ್ ಅಯ್ಯರ್ ಅವರು ‘ಕೇಂದ್ರ ಜಲ ಆಯೋಗದ’  ಮುಂದಿನ ಅಧ್ಯಕ್ಷರಾಗಿ ನಿಯುಕ್ತಿಯಾಗಿದ್ದಾರೆ. ಗುರುವಾರ ಡಿಸೆಂಬರ್ 1 ರಿಂದ ಅವರು ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಚಂದ್ರಶೇಖರ್...

KSRTC ಬಸ್‌ಗಳಿಗೆ ಹೆಸರು, ಬ್ರ್ಯಾಂಡ್‌ ಸೂಚಿಸಿ ಬಹುಮಾನ ಗೆಲ್ಲಿ

newsics.com ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ನೂತನವಾಗಿ ಬಸ್‌ಗಳಿಗೆ ಹೆಸರು, ಬ್ರ್ಯಾಂಡ್‌ ಸೂಚಿಸಿ  ಬಹುಮಾನ ಗೆಲ್ಲ  ಬಹುದಾಗಿದೆ. ಮಲ್ಟಿ ಆ್ಯಕ್ಸೆಲ್ ಸ್ಲೀಪರ್ ಹಾಗೂ ವಿದ್ಯುತ್ ಚಾಲಿತ ವಾಹನ ಗಳಿಗೆ ಸಾರ್ವಜನಿಕರು ಹಾಗೂ ಪ್ರಯಾಣಿಕರಿಂದ...

ವಿಚಿತ್ರ ಹಬ್ಬದ ಆಚರಣೆ- ಕಲ್ಲಿನ ಬಂಡೆಗೆ ಡಿಕ್ಕಿ ಹೊಡೆದು ದೇವರಿಗೆ ನಮಸ್ಕಾರ

newsics.com ವಿಜಯಪುರ: ಜಿಲ್ಲೆಯ ನಿಡಗುಂದಿ ತಾಲೂಕಿನ ಗಣಿ ಗ್ರಾಮದ ಸೋಮೇಶ್ವರ ದೇವರ ಜಾತ್ರೆಯಲ್ಲಿ ಕಲ್ಲಿನ ಬಂಡೆಗೆ ಡಿಕ್ಕಿ ಹೊಡೆದು ದೇವರಿಗೆ ನಮಸ್ಕಾರ ಮಾಡುವ ವಿಶಿಷ್ಟ ಆಚರಣೆ ಕಂಡು ಬರುತ್ತದೆ. ಪ್ರತಿವರ್ಷ ಛಟ್ಟಿ ಅಮವಾಸ್ಯೆಯ ಆಸುಪಾಸು ನಡೆಯುವ...
- Advertisement -
error: Content is protected !!