newsics.com
ಕೋಪನ್ ಹ್ಯಾಗನ್: ಡೆನ್ಮಾರ್ಕ್‌ನ ಸ್ಟಾರ್ ಆಟಗಾರ ಕ್ರಿಶ್ಚಿಯನ್ ಎರಿಕ್ಸೆನ್ ಆಟದ ಮಧ್ಯೆಯೇ ಕುಸಿದುಬಿದ್ದಿರುವ ಘಟನೆ ನಡೆದಿದೆ. ಶನಿವಾರ(ಜೂ.12) ನಡೆಯುತ್ತಿದ್ದ ಯೂನಿಯನ್ ಯುರೋಪಿಯನ್ ಫುಟ್ಬಾಲ್ ಅಸೋಸಿಯೇಶನ್ (ಯುಎಎಫ್‌ಸಿಎ) ಯೂರೋ 2020 ಡೆನ್ಮಾರ್ಕ್-ಫಿನ್‌ಲ್ಯಾಂಡ್ ಪಂದ್ಯದ ವೇಳೆ ಈ ಘಟನೆ ಸಂಭವಿಸಿದೆ.
ಕೋಪನ್ ಹ್ಯಾಗನ್ ನ ಪಾರ್ಕನ್ ಸ್ಟೇಡಿಯಂನಲ್ಲಿ ನಡೆಯುತ್ತಿದ್ದ ಯೂರೋ 2020 ಮೂರನೇ ಪಂದ್ಯದಲ್ಲಿ ಡೆನ್ಮಾರ್ಕ್ ಮಿಡ್‌ಫೀಲ್ಡರ್ ಕ್ರಿಶ್ಚಿಯನ್ ಎರಿಕ್ಸೆನ್ ಕುಸಿದು ಬಿದ್ದಿದ್ದಾರೆ. ಅವರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಶನಿವಾರ ನಡೆಯಲಿದ್ದ ಡೆನ್ಮಾರ್ಕ್-ಫಿನ್‌ಲ್ಯಾಂಡ್ ಪಂದ್ಯವನ್ನು ಅಮಾನತುಗೊಳಿಸಲಾಗಿದೆ
ಪಂದ್ಯದ ಮೊದಲಾರ್ಧಕ್ಕೆ ಕೆಲವೇ ನಿಮಿಷ ಬಾಕಿ ಇರುವಾಗ 29ರ ಹರೆಯದ ಕ್ರಿಶ್ಚಿಯನ್ ಮೈದಾನದಲ್ಲೇ ಕುಸಿದುಬಿದ್ದರು. ಫಿನ್‌ಲ್ಯಾಂಡ್ ಹಾಫ್ ಭಾಗದಲ್ಲಿ ಕುಸಿದಿದ್ದ ಕ್ರಿಶ್ಚಿಯನ್‌ಗೆ ವೈದ್ಯಕೀಯ ಉಪಚಾರ ನೀಡಿ ಬಳಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.