newsics.com
ಲಂಡನ್: ವಿಶ್ವಸಂಸ್ಥೆಯ ಮಕ್ಕಳ ನಿಧಿ (ಯುನಿಸೆಫ್) ಬ್ರಿಟನ್ ಘಟಕದ ಮುಖ್ಯಸ್ಥ ಭಾರತ ಮೂಲದ ಸಚ ದೇಶ್ಮುಖ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಅಧಿಕಾರ ವಹಿಸಿಕೊಂಡ ಕೆಲವೇ ದಿನಗಳಲ್ಲಿ ಅವರು ರಾಜೀನಾಮೆ ನೀಡಿರುವುದು ಅಚ್ಚರಿಗೆ ಕಾರಣವಾಗಿದೆ. ಬ್ರಿಟನ್ ಯುನಿಸೆಫ್ ಘಟಕದ ಕಾರ್ಯಕಾರಿ ನಿರ್ದೇಶಕರಾಗಿ ಕಳೆದ ಏಪ್ರಿಲ್’ನಲ್ಲಿ ಅಧಿಕಾರ ವಹಿಸಿಕೊಂಡಿದ್ದ ದೇಶ್ಮುಖ್, ಹಿರಿಯ ಅಧಿಕಾರಿಯೊಬ್ಬರ ವಿರುದ್ಧದ ಪೀಡನೆ ಆರೋಪಗಳ ಬೆನ್ನು ಹತ್ತಿದ್ದರು ಎನ್ನಲಾಗಿದೆ. ಬ್ರಿಟನ್ನ ಮಾಜಿ ಸಚಿವರೂ ಆಗಿರುವ ಡಗ್ಲಸ್ ಅಲೆಕ್ಸಾಂಡರ್ 2018ರಿಂದ ಯುನಿಸೆಫ್ ಬ್ರಿಟನ್ನ ಅಧ್ಯಕ್ಷರಾಗಿದ್ದಾರೆ. ಅವರ ವಿರುದ್ಧ ದಾಖಲಾಗಿರುವ ಪೀಡನೆ ಆರೋಪಗಳ ಬಗ್ಗೆ ತನಿಖೆ ನಡೆಯಬೇಕು ಎಂಬುದಾಗಿ ಸಚ ದೇಶ್ಮುಖ್ ಒತ್ತಾಯಿಸಿದ್ದರು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿದೆ.
ಯುನಿಸೆಫ್ ಬ್ರಿಟನ್ ಮುಖ್ಯಸ್ಥ, ಭಾರತ ಮೂಲದ ದೇಶ್ಮುಖ್ ರಾಜೀನಾಮೆ
Follow Us