Tuesday, March 2, 2021

ಟರ್ಕಿಯಲ್ಲಿ ಚಿನ್ನದ ಭಾರೀ ನಿಕ್ಷೇಪ ಪತ್ತೆ

newsics.com
ಟರ್ಕಿ: ಚಿನ್ನದ ಗಣಿಗಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಟರ್ಕಿ 99 ಟನ್ ಚಿನ್ನದ ನಿಕ್ಷೇಪವನ್ನು ಪತ್ತೆ ಹಚ್ಚಿದೆ.
ಈ ಹೊಸ ಚಿನ್ನದ ನಿಕ್ಷೇಪವನ್ನು ಎರಡು ವರ್ಷದೊಳಗೆ ತೆಗೆಯಲು ಪ್ರಾರಂಭಿಸಲಾಗುತ್ತದೆ ಎಂದು ಕಂಪನಿಯು ತಿಳಿಸಿದೆ. ಈ ನಿಕ್ಷೇಪದ ಮೌಲ್ಯ 6 ಬಿಲಿಯನ್ ಡಾಲರ್’ನಷ್ಟಿದೆ ಎಂದು ಹೇಳಿದೆ.
ಈ ಚಿನ್ನದ ನಿಕ್ಷೇಪ ಕೆಲವು ದೇಶಗಳ ಜಿಡಿಪಿಗಿಂತ ಹೆಚ್ಚಿದೆ ಎಂದು ಟರ್ಕಿ ಅಧಿಕಾರಿಗಳು ಹೇಳಿದ್ದಾರೆ. ಈ ನಿಧಿಯನ್ನು ಟರ್ಕಿಯ ಕೃಷಿ ಸಾಲ ಸಹಕಾರ ಸಂಸ್ಥೆಗಳ ಮುಖ್ಯಸ್ಥ ಫಹ್ರೆಟಿನ್ ಪೊಯ್ರಾಜ್ ಮತ್ತು ರಸಗೊಬ್ಬರ ಉತ್ಪಾದನಾ ಸಂಸ್ಥೆಯಾದ ಗುಬರ್ಟಾಸ್ ಕಂಡುಹಿಡಿದಿದ್ದಾರೆ ಎಂದು ರಾಜ್ಯ ಟರ್ಕಿಶ್ ಸುದ್ದಿ ಸಂಸ್ಥೆ ವರದಿ ಮಾಡಿದೆ.
ನಿಕ್ಷೇಪ ಪತ್ತೆಯಾದ ಸುದ್ದಿ ಹೊರಬೀಳುತ್ತಿದ್ದಂತೆ ಟರ್ಕಿಶ್ ವಿನಿಮಯ ಕೇಂದ್ರಗಳಲ್ಲಿ ಗುಬರ್ಟಾಸ್ ಷೇರುಗಳು ಶೇ.10ರಷ್ಟು ಏರಿಕೆಯಾಗಿವೆ. ಈ ವರ್ಷ ಟರ್ಕಿ 38 ಟನ್ ಚಿನ್ನ ಉತ್ಪಾದಿಸುವ ಮೂಲಕ ತನ್ನ ದಾಖಲೆಯನ್ನು ಮುರಿಯಿತು. ಇಂಧನ ಸಚಿವ ಫೇತ್ ಡೊನ್ಮೆಜ್ ಸೆಪ್ಟೆಂಬರ್‌ನಲ್ಲಿ ವಾರ್ಷಿಕ 100 ಟನ್‌ಗಳಷ್ಟು ಉತ್ಪಾದನೆಯನ್ನು ತಲುಪುವ ಗುರಿ ಹೊಂದಿದ್ದರು. ಈ ಹೊಸ ನಿಕ್ಷೇಪ ಗುರಿ ಮುಟ್ಟಲು ಪ್ರೇರಣೆ ನೀಡಿದೆ. ಈ ನಿಕ್ಷೇಪದ ಮೌಲ್ಯ 6 ಬಿಲಿಯನ್ ಡಾಲರ್’ನಷ್ಟಿದೆ. ಮಾಲ್ಡೀವ್ಸ್‌ನ ಜಿಡಿಪಿ 4.87 ಬಿಲಿಯನ್ ಡಾಲರ್ ಆಗಿದೆ. ಬಾರ್ಬಡೋಸ್, ಗಯಾನಾ, ಮಾಂಟೆನೆಗ್ರೊ, ಮಾರಿಟಾನಿಯಾ, ಲೆಸೊಥೊ ದೇಶಗಳ ಜಿಡಿಪಿಯು 6 ಬಿಲಿಯನ್ ಡಾಲರ್‌ಗಳಿಗಿಂತ ಕಡಿಮೆಯಿದೆ.

ಕಾಶ್ಮೀರ ವಶ ಬಳಿಕ ಎಲ್ಲ ಕಡೆಯಿಂದ ಭಾರತದ ಮೇಲೆ ದಾಳಿ- ಶೋಯಿಬ್ ಅಖ್ತರ್

ಸೂಪರ್ ಸ್ಟಾರ್ ರಜನಿಕಾಂತ್ ಅಸ್ವಸ್ಥ; ಆಸ್ಪತ್ರೆಗೆ ದಾಖಲು

ವದಂತಿ ನಂಬದಿರಲು ರೈತರಿಗೆ ಮತ್ತೆ ಪ್ರಧಾನಿ ಮೋದಿ ಮನವಿ

ಮತ್ತಷ್ಟು ಸುದ್ದಿಗಳು

Latest News

ಖಾಕಿ ಬಟ್ಟೆ ಧರಿಸಲು ಸಜ್ಜಾಗುತ್ತಿದ್ದಾರೆ 15 ಮಂಗಳಮುಖಿಯರು!

newsics.comರಾಯ್'ಪುರ(ಛತ್ತೀಸ್ಗಢ): 15 ತೃತೀಯ ಲಿಂಗಿಗಳು  ಕಾನ್ಸ್ಟೇಬಲ್ ಹುದ್ದೆಯ ಪರೀಕ್ಷೆ ಪಾಸ್ ಮಾಡಿದ್ದು, ಖಾಕಿ ಬಟ್ಟೆ ಹಾಕಲು ಸಿದ್ಧತೆ ನಡೆಸುತ್ತಿದ್ದಾರೆ.ದೈಹಿಕ ಪರೀಕ್ಷೆಯ ಫಲಿತಾಂಶ ಇಂದು(ಮಾ.1)...

ಗೃಹಸಾಲದ ಮೇಲಿನ ಆರಂಭಿಕ ಬಡ್ಡಿದರ ಇಳಿಸಿದ ಎಸ್’ಬಿಐ

newsics.comನವದೆಹಲಿ: ಭಾರತೀಯ ಸ್ಟೇಟ್‌ ಬ್ಯಾಂಕ್‌ನ ಗೃಹ ಸಾಲದ ಮೇಲಿನ ಆರಂಭಿಕ ಬಡ್ಡಿ ದರ ಶೇ. 6.70ಕ್ಕೆ ಇಳಿಕೆಯಾಗಿದೆ.75 ಲಕ್ಷ ರೂ.ಗಳವರೆಗಿನ ಗೃಹ ಸಾಲದ ಮೇಲಿನ ಬಡ್ಡಿ ದರ ಶೇ. 6.70ರಷ್ಟಿರಲಿದ್ದು,...

ಕೊರೋನಾ ಲಸಿಕೆ ಪಡೆದ ಇನ್ಫೋಸಿಸ್ ಮೂರ್ತಿ ದಂಪತಿ

newsics.comಬೆಂಗಳೂರು: ಮೂರನೇ ಹಂತದ ವ್ಯಾಕ್ಸಿನ್ ಸೋಮವಾರ ಆರಂಭವಾಗಿದ್ದು, ಇನ್ಫೋಸಿಸ್ ಫೌಂಡೇಶನ್ ಮುಖ್ಯಸ್ಥರಾದ ಸುಧಾಮೂರ್ತಿ ಹಾಗೂ ನಾರಾಯಣಮೂರ್ತಿ, ಬೊಮ್ಮಸಂದ್ರದ ನಾರಾಯಣ ಹೆಲ್ತ್ ಸಿಟಿಯಲ್ಲಿ ಕೋವಿಡ್ ವ್ಯಾಕ್ಸಿನ್ ಪಡೆದುಕೊಂಡರು.ನಾರಾಯಣಮೂರ್ತಿ ಹಾಗೂ ಸುಧಾಮೂರ್ತಿ ಅವರು...
- Advertisement -
error: Content is protected !!