ಬೀಜಿಂಗ್: ಡಿಜಿಟಲ್ ನ್ಯಾಯಾಂಗ ವ್ಯವಸ್ಥೆ ರೂಪಿಸುವತ್ತ ಮೊದಲ ಹೆಜ್ಜೆ ಇಟ್ಟಿರುವ ಚೀನಾ, ಜಗತ್ತಿನ ನ್ಯಾಯಾಂಗ ವ್ಯವಸ್ಥೆಯಲ್ಲೇ ದಾಪುಗಾಲಿಡುತ್ತಿದೆ.
‘ಡಿಜಿಟಲ್ ಕೋರ್ಟ್’ಗೆ ಚೀನಾದಲ್ಲಿ ಇತ್ತೀಚೆಗೆ ಚಾಲನೆ ನೀಡಲಾಗಿದ್ದು, ಇಲ್ಲಿ ವಾದ ಹಾಗೂ ಪ್ರತಿವಾದ, ತೀರ್ಪು ಎಲ್ಲವೂ ಡಿಜಿಟಲ್ ಮೂಲಕವೇ ನಡೆಯಲಿದೆ. ಕೃತಕ ಬುದ್ಧಿಮತ್ತೆ ಹೊಂದಿರುವ ರೋಬಾಟ್ಗಳು ನ್ಯಾಯಾಧೀಶರ ಕೆಲಸ ಮಾಡಲಿವೆ.
ಇಲ್ಲಿನ ಹಂಗ್ಜು ಇಂಟರ್ನೆಟ್ ಕೋರ್ಟ್ ನಲ್ಲಿ ಕೆಲದಿನಗಳ ಹಿಂದೆ ಡಿಜಿಟಲ್ ಕೋರ್ಟ್ ಕಲಾಪವನ್ನು ಪ್ರಾಯೋಗಿಕವಾಗಿ ನಡೆಸಲಾಗಿದೆ. ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ (ಎಐ) ನ್ಯಾಯಾಧೀಶರು ಮೊಕದ್ದಮೆಗಳ ವಿಚಾರಣೆಗಳನ್ನು ನಡೆಸುತ್ತಾರೆ. ಸೈಬರ್ ಕೋರ್ಟ್ ಚಾಟ್ ಆಪ್ ಮೂಲಕ ವಾದ, ಪ್ರತಿವಾದ ನಡೆದು ತೀರ್ಪು ಹೊರಬೀಳುತ್ತದೆ.
ಸಾಮಾಜಿಕ ಮಾಧ್ಯಮ ವೇದಿಕೆಯಾದ ‘ವಿ ಚಾಟ್’ನಲ್ಲಿ ಒದಗಿಸಲಾದ ‘ಸಂಚಾರಿ ಕೋರ್ಟ್’ ಇದುವರೆಗೆ ಸುಮಾರು 30 ಲಕ್ಷ ತೀರ್ಪಗಳನ್ನು ನೀಡಿದೆ. ಇದಕ್ಕಾಗಿ ಬ್ಲಾಕ್ಚೈನ್ ಮತ್ತು ಕ್ಲೌಡ್ಕಂಪ್ಯೂಟ್ನಂಥ ತಂತ್ರಜ್ಞಾನವನ್ನು ಬಳಸಲಾಗುತ್ತದೆ ಎಂದು ಚೀನಾದ ಸರ್ವೋನ್ನತ ನ್ಯಾಯಾಲಯ (ಸುಪ್ರೀಂ ಕೋರ್ಟ್) ತಿಳಿಸಿದೆ.