ಲಂಡನ್: ಕೊರೋನಾದಿಂದ ಕಂಗೆಟ್ಟಿರುವ ನ್ಯೂಜಿಲ್ಯಾಂಡ್ ಆರ್ಥಿಕತೆ ಬಲಪಡಿಸಲು ಹೆಲಿಕಾಪ್ಟರ್ ಮನಿ ಸೇರಿದಂತೆ ಹಲವು ಕ್ರಮಗಳ ಜಾರಿಗೆ ಚಿಂತನೆ ನಡೆಸಿದೆ. ಜನರಿಗೆ ನೇರವಾಗಿ ಉಚಿತ ಹಣ ನೀಡುವುದು ಕೂಡ ಪರಿಗಣಿಸಲಾಗುತ್ತಿದೆ. ಈ ಸಂಬಂಧ ಚರ್ಚೆಗಳು ನಡೆಯುತ್ತಿವೆ ಎಂದು ನ್ಯೂಜಿಲ್ಯಾಂಡ್ ಹಣಕಾಸು ಸಚಿವ ಗ್ರಾಂಟ್ ರಾಬರ್ಟ್ ಸನ್ ಹೇಳಿದ್ದಾರೆ. ವಿತ್ತೀಯ ಶಿಸ್ತನ್ನು ಗಮನದಲ್ಲಿರಿಸಿಕೊಂಡು ದೇಶದ ಆರ್ಥಿಕತೆ ಬಲಪಡಿಸಲು ಸೂಕ್ತ ಕ್ರಮ ಕೈಗೊಳ್ಳುವುದಾಗಿ ಸಚಿವ ಗ್ರಾಂಟ್ ಹೇಳಿದ್ದಾರೆ. ಕೊರೋನಾದಿಂದ ನ್ಯೂಜಿಲ್ಯಾಂಡ್ ಆರ್ಥಿಕ ಪರಿಸ್ಥಿತಿ ತೀರಾ ಹದಗೆಟ್ಟಿದೆ. ಆದರೆ ವಿಶ್ವದ ಬಲಾಡ್ಯ ರಾಷ್ಟ್ರಗಳು ಈಗಲೂ ಕೂಡ ಹೆಲಿಕಾಪ್ಟರ್ ಹಣ ಕಲ್ಪನೆಯಿಂದ ದೂರ ಉಳಿದಿವೆ. ಇದು ವಿಪರೀತ ಹಣದುಬ್ಬರಕ್ಕೆ ಕಾರಣವಾಗಲಿದೆ ಎಂಬುದು ಈ ರಾಷ್ಟ್ರಗಳ ಹೆದರಿಕೆಯಾಗಿದೆ. ನ್ಯೂಜಿಲ್ಯಾಂಡ್ ಆರ್ಥಿಕತೆ ದೇಶದ ರಫ್ತನ್ನು ಅಲವಂಬಿಸಿದ್ದು, ಕೊರೋನಾದಿಂದ ಇದು ನೆಲಕಚ್ಚಿದೆ.
ಮತ್ತಷ್ಟು ಸುದ್ದಿಗಳು
ಕೊರೋನಾ ಎಫೆಕ್ಟ್: ಆಸ್ಪತ್ರೆಗಳಲ್ಲಿ ವೀರ್ಯದ ಕೊರತೆ!
newsics.com
ಸ್ವೀಡನ್: ಕೊರೋನಾ ಹಿನ್ನೆಲೆಯಲ್ಲಿ ಸ್ವೀಡನ್ ದೇಶದ ಆಸ್ಪತ್ರೆಗಳಲ್ಲಿ ವೀರ್ಯದ ಕೊರತೆ ಉಂಟಾಗಿದೆ.
ದೇಶದಲ್ಲಿ ಕೊರೋನಾ ಸಾಂಕ್ರಾಮಿಕದ ಕಾರಣದಿಂದ ವೀರ್ಯ ದಾನಕ್ಕೆ ಯಾರೂ ಮುಂದಾಗುತ್ತಿಲ್ಲ. ಹೀಗಾಗಿ ವೀರ್ಯ ಶೇಖರಣೆ ಸಾಧ್ಯವಾಗುತ್ತಿಲ್ಲ. ಆದ್ದರಿಂದ ಇನ್ನು 30 ತಿಂಗಳವರೆಗೆ...
ಅಪರಿಚಿತನಿಂದ ಗುಂಡಿನ ದಾಳಿ: 8 ಮಂದಿ ಸಾವು, ಹತ್ತು ಜನರಿಗೆ ಗಾಯ
newsics.com
ನ್ಯೂಯಾರ್ಕ್: ಅಮೆರಿಕದ ಇಂಡಿಯಾನಾದಲ್ಲಿ ಆಗಂತುಕನೊಬ್ಬ ನಡೆಸಿದ ಭೀಕರ ಗುಂಡಿನ ದಾಳಿಗೆ ಆರು ಮಹಿಳೆಯರು ಸೇರಿ 8 ಮಂದಿ ಮೃತಪಟ್ಟಿದ್ದಾರೆ. ಹತ್ತಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
ಇಂಡಿಯಾನಾದ ಪೊಲೀಸ್ ನಗರದ ಫೆಡೆಕ್ಸ್ ಎಂಬಲ್ಲಿ ಈ ದಾಳಿ...
ಹಿಜಾಬ್ ಧರಿಸದೆ ಫೋಟೋ ಶೂಟ್: ರೂಪದರ್ಶಿಯನ್ನೇ ಅಪಹರಿಸಿದ ಉಗ್ರರು
newsics.com
ಯೆಮನ್: ಹಿಜಾಬ್ ( ಮುಸ್ಲಿಂ ಮಹಿಳೆಯರು ತಲೆಯ ಮೇಲೆ ಧರಿಸುವ ಹೊದಿಕೆ) ಧರಿಸದೆ ಫೋಟೋ ಶೂಟ್ ಮಾಡಿದ್ದಕ್ಕೆ ಉಗ್ರರು ರೂಪದರ್ಶಿಯನ್ನು ಅಪಹರಿಸಿದ ಘಟನೆ ನಡೆದಿದೆ.
ಯೆಮನ್ ದೇಶದಲ್ಲಿ ಘಟನೆ ನಡೆದಿದ್ದು, ಎಂತೆಸಾರ್ ಎಲ್ ಹಮ್ಮಾಡಿ(...
ಪಾಕಿಸ್ತಾನದಲ್ಲಿ ಮೂಲಭೂತವಾದಿಗಳ ಪ್ರತಿಭಟನೆ: ಸಾಮಾಜಿಕ ಜಾಲ ತಾಣಗಳಿಗೆ ನಿಷೇಧ
newsics.com
ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಮೂಲಭೂತವಾದಿ ಪಕ್ಷ ತೆಹರಿಕ್ ಇ ಲಬೈಕ್ ಪಾಕಿಸ್ತಾನದ ಪ್ರತಿಭಟನೆ ಹಿನ್ನೆಲೆಯಲ್ಲಿ ಫೇಸ್ ಬುಕ್ ಸೇರಿದಂತೆ ಎಲ್ಲ ಸಾಮಾಜಿಕ ಜಾಲ ತಾಣಗಳ ಚಟುವಟಿಕೆ ಮೇಲೆ ಪಾಕಿಸ್ತಾನ ತಾತ್ಕಾಲಿಕ ನಿಷೇಧ ಹೇರಿದೆ.
ಫ್ರಾನ್ಸ್ ಸರ್ಕಾರದ...
ಜಗತ್ತಿನ ಅತಿ ದೊಡ್ಡ ವಂಚಕ ಬರ್ನಾರ್ಡ್ ಮೆಡೋಫ್ ಇನ್ನಿಲ್ಲ
newsics.com
ವಾಷಿಂಗ್ಟನ್: ಜಗತ್ತಿನ ಅತಿ ದೊಡ್ಡ ಮೋಸದ ವ್ಯವಹಾರಕ್ಕಾಗಿ 150 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದ ಬರ್ನಾರ್ಡ್ ಎಲ್. ಮೆಡೋಫ್ ಕೊನೆಯುಸಿರೆಳೆದಿದ್ದಾನೆ.
ಬಟ್ನರ್ ಜೈಲಿನಲ್ಲಿ ಬಂಧಿಯಾಗಿದ್ದ ಆತ ಇತ್ತೀಚೆಗೆ ಅನಾರೋಗ್ಯಕ್ಕೆ ತುತ್ತಾಗಿದ್ದು, ಬಟ್ನರ್...
ವೇತನ ಸಹಿತ ರಜೆಗೆ ಪತ್ನಿಗೆ ಮೂರು ಬಾರಿ ಡಿವೋರ್ಸ್ – ನಾಲ್ಕು ಸಲ ಮದುವೆ
newsics.com
ಬ್ಯಾಂಕಾಂಕ್: ವ್ಯವಸ್ಥೆಯ ದುರುಪಯೋಗ ಹೇಗೆ ಮಾಡಬಹುದು ಎಂಬುದಕ್ಕೆ ಇಲ್ಲಿದೆ ಒಂದು ಉದಾಹರಣೆ. ತೈವಾನ್ ನಲ್ಲಿ ಮದುವೆಯಾದವರಿಗೆ ಎಂಟು ದಿನಗಳ ವೇತನ ಸಹಿತ ರಜೆ ನೀಡುವ ಪದ್ದತಿ ಜಾರಿಯಲ್ಲಿದೆ. ಅದೇ ರೀತಿ ಅಲ್ಲಿಯ ಬ್ಯಾಂಕ್...
ಭಾರತದಲ್ಲಿ ಕೊರೋನಾ ಆರ್ಭಟ : ಬ್ರಿಟನ್ ಪ್ರಧಾನಿ ಪ್ರವಾಸ ಅವಧಿ ಮೊಟಕು
newsics.com
ಲಂಡನ್: ಭಾರತದಲ್ಲಿ ಕೊರೋನಾ ಅಬ್ಬರಿಸುತ್ತಿರುವ ಹಿನ್ನೆಲೆಯಲ್ಲಿ ಈ ತಿಂಗಳ ಅಂತ್ಯದಲ್ಲಿ ಭಾರತಕ್ಕೆ ಭೇಟಿ ನೀಡಲಿರುವ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ ಸನ್ ತಮ್ಮ ಪ್ರವಾಸದ ಅವಧಿಯನ್ನು ಮೊಟಕುಗೊಳಿಸುವ ಸಾಧ್ಯತೆ ಹೆಚ್ಚಾಗಿದೆ.
ತಮ್ಮ ಪ್ರವಾಸದ ವೇಳೆ...
ಒಂಟೆಗಳ ಸಂಚಾರಕ್ಕೂ ಟ್ರಾಫಿಕ್ ಸಿಗ್ನಲ್ ರೂಲ್ಸ್!
newsics.com
ಚೀನಾ: ಚೀನಾ ಸರ್ಕಾರ ಇದೇ ಮೊದಲ ಬಾರಿಗೆ ಒಂಟೆಗಳ ಸಂಚಾರಕ್ಕೆ ಟ್ರಾಫಿಕ್ ಸಿಗ್ನಲ್'ಗಳನ್ನು ಅಳವಡಿಸಿದೆ.
ಜಗತ್ತಿನಲ್ಲಿ ಇದೇ ಮೊದಲ ಬಾರಿಗೆ ಒಂಟೆಗಳಿಗೆ ಟ್ರಾಫಿಕ್ ಸಿಗ್ನಲ್ ಅಳವಡಿಸಿದ ದೇಶ ಎಂಬ ಪಟ್ಟವನ್ನು ಚೀನಾ ಪಡೆದುಕೊಂಡಿದೆ.
ಒಂಟೆಗಳ ಘರ್ಷಣೆಯನ್ನು...
Latest News
ಕುಂಭಮೇಳದ ಪ್ರಧಾನ ಸಾಧು ಕೊರೋನಾಗೆ ಬಲಿ
newsics.com
ಹರಿದ್ವಾರ: ಕುಂಭಮೇಳದಲ್ಲಿ ಪಾಲ್ಗೊಂಡಿದ್ದ ಪ್ರಧಾನ ಸಾಧು ಕೊರೋನಾ ಸೋಂಕಿಗೆ ಬಲಿಯಾಗಿದ್ದಾರೆ.
65 ವರ್ಷದ ಸಾಧು ಈ ವಾರದ ಆರಂಭದಲ್ಲಿ ಆಸ್ಪತ್ರೆಗೆ ದಾಖಲಾಗಿದ್ದು, ಕೊರೋನಾ ಸೋಂಕಿನಿಂದಾಗಿ ಮೃತಪಟ್ಟಿದ್ದಾರೆ.
ಕುಂಭಮೇಳಕ್ಕೆ ಮಧ್ಯಪ್ರದೇಶದಿಂದ...
Home
ಬೆಂಗಳೂರು ವಿವಿ ಪರೀಕ್ಷೆಗಳು ಮುಂದೂಡಿಕೆ
NEWSICS -
newsics.com
ಬೆಂಗಳೂರು: ಕೊರೋನಾ ಅಬ್ಬರ ಹಾಗೂ ಸಾರಿಗೆ ನೌಕರರ ಮುಷ್ಕರ ಹಿನ್ನೆಲೆಯಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಪರೀಕ್ಷೆಗಳನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ.
ಶೀಘ್ರದಲ್ಲೇ ಮುಂದಿನ ದಿನಾಂಕಗಳನ್ನು ಪ್ರಕಟಿಸುವುದಾಗಿ ತಿಳಿಸಿದೆ.
ಏ.19, 20, 21ರಂದು ನಡೆಯಬೇಕಿದ್ದ ಬೆಂಗಳೂರು ವಿಶ್ವವಿದ್ಯಾಲಯದ ಪರೀಕ್ಷೆಗಳನ್ನು ಮುಂದೂಡಲಾಗಿದೆ...
Home
ಪಂಜಾಬ್ ವಿರುದ್ಧ ಚೆನ್ನೈಗೆ ಸುಲಭದ ಗೆಲುವು
NEWSICS -
newsics.com
ಮುಂಬೈ: ಐಪಿಎಲ್ 2021ರ ಆವೃತ್ತಿಯ 8ನೇ ಪಂದ್ಯದಲ್ಲಿ ಚೆನ್ನೈ ಬೌಲರ್ಗಳ ದಾಳಿಗೆ ನಲುಗಿದ ಪಂಜಾಬ್ ಕಿಂಗ್ಸ್ ಹೀನಾಯ ಸೋಲು ಅನುಭವಿಸಿತು. ಪಂದ್ಯದಲ್ಲಿ ಚೆನ್ನೈ ತಂಡ 6 ವಿಕೆಟ್ ಗೆಲುವು ಗಳಿಸಿದೆ.
106 ರನ್ಗಳ...