Saturday, November 26, 2022

ಜಗತ್ತಿನ ಮೂರನೇ ಅತಿ ದೊಡ್ಡ ವಜ್ರ ಪತ್ತೆ

Follow Us

newsics.com

ಬೋಟ್ಸ್ವಾನ: ಜಗತ್ತಿನ‌ ಮೂರನೇ ಅತಿ ದೊಡ್ಡ ವಜ್ರ ಗ್ಯಾಬರೋನ್ ನಲ್ಲಿ ಪತ್ತೆಯಾಗಿದೆ.

ಐದು ದಶಕಗಳಿಂದ ವಜ್ರದ ಗಣಿಗಾರಿಕೆ ಮತ್ತು ವ್ಯಾಪಾರದಲ್ಲಿ ತೊಡಗಿರುವ ಡಿ ಬೀರ್ಸ್ ಕಂಪನಿಯ ವಿಭಾಗವಾದ ಡೆಬ್ಸ್ವಾನಾ ಡೈಮಂಡ್ ಕಂಪನಿ ಪತ್ತೆಹಚ್ಚಿದ್ದು, 1,098 ಕ್ಯಾರೆಟ್ ನ ಡೈಮಂಡ್ ಇದಾಗಿದೆ.

ಪ್ರಾಥಮಿಕ ವಿಶ್ಲೇಷಣೆಯಲ್ಲಿ ಈ ಡೈಮಂಡ್ ಜಗತ್ತಿನ ಮೂರನೇ ಅತಿ ದೊಡ್ಡ ವಜ್ರ ಎಂದು ಹೇಳಲಾಗುತ್ತಿದೆ. ಜೂನ್ 1ರಂದು ಈ ವಜ್ರವನ್ನು ಅನ್ವೇಷಿಸಲಾಗಿದ್ದು, ಇದಕ್ಕೂ ಮೊದಲು ಅಂದರೆ 1905ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾಗಿದ್ದ ಕಲ್ಲಿನನ್ ವಜ್ರ ಪ್ರಪಂಚದಲ್ಲಿ ಅತಿ ದೊಡ್ಡದಾಗಿದೆ. ನಂತರ 2015ರಲ್ಲಿ ಬೋಟ್ಸ್ವಾನಾದಲ್ಲಿ ಪತ್ತೆಯಾಗಿದ್ದ ಲೆಸೆಡಿ ಲಾ ರೊನಾ ವಜ್ರ ಎರಡನೇ ಅತಿ ದೊಡ್ಡ ವಜ್ರವಾಗಿದೆ.

ಈಗ ಪತ್ತೆಯಾಗಿರುವ ವಜ್ರ ಮೂರನೇ ಅತಿ ದೊಡ್ಡ ವಜ್ರವಾಗಿದೆ ಎಂದು ಡೆಬ್ಸ್ವಾನಾ ಡೈಮಂಡ್ ಕಂಪನಿಯ ಹಂಗಾಮಿ ವ್ಯವಸ್ಥಾಪಕ ನಿರ್ದೇಶಕ ಲೈನೆಟ್ ಆರ್ಮ್ಸ್ಟ್ರಾಂಗ್ ಮಾಹಿತಿ ನೀಡಿದ್ದಾರೆ.

ಆದರೆ, ಈ ವಜ್ರದ ಬೆಲೆಯನ್ನು ಕಂಪನಿ ಸ್ಪಷ್ಟಪಡಿಸಿಲ್ಲ. ಡೆಬ್ಸ್ವಾನಾ ಡೈಮಂಡ್ ಕಂಪನಿ ಈ ವಜ್ರವನ್ನು ಮಾರಾಟ ಮಾಡುತ್ತದೆಯೇ ಅಥವಾ ಇಲ್ಲವೇ ಎಂಬುದೂ ಸ್ಪಷ್ಟವಾಗಿ ಹೇಳಲು ಸಾಧ್ಯವಿಲ್ಲ ಎಂದು ಆರ್ಮ್ಸ್ಟ್ರಾಂಗ್ ಹೇಳಿದ್ದಾರೆ.

ಹೆಚ್ಚಿದ ಸಾಗಣೆ, ಉತ್ಪಾದನಾ ವೆಚ್ಚ: ಟಿವಿ ಬೆಲೆ ಹೆಚ್ಚಳ ಸಾಧ್ಯತೆ

ಹೊಸನಗರ ತಾಲೂಕಲ್ಲಿ ದಾಖಲೆಯ ಮಳೆ, ಜೋಗ ಜಲಪಾತಕ್ಕೆ ಜೀವಕಳೆ

ಗಾಜಿಯಾಬಾದ್ ಹಲ್ಲೆ ಪ್ರಕರಣ: ನಟಿ‌ ಸ್ವರಾ, ಟ್ವಿಟರ್ ಎಂಡಿ‌ ವಿರುದ್ಧ ದೂರು

ಮತ್ತಷ್ಟು ಸುದ್ದಿಗಳು

vertical

Latest News

ಚರ್ಮ ಕ್ಯಾನ್ಸರ್ ಬಗ್ಗೆ ಜನ ಜಾಗೃತಿ: ನಗ್ನರಾಗಿ ಪೋಸ್ ನೀಡಿದ 2500 ಮಂದಿ

newsics.com ಸಿಡ್ನಿ: ಹೆಚ್ಚುತ್ತಿರುವ ಚರ್ಮ ಕ್ಯಾನ್ಸರ್ ಬಗ್ಗೆ ಜನ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಫೋಟೋ ಶೂಟ್ ಗೆ 2500 ಮಂದಿ ನಗ್ನರಾಗಿ ಪೋಸ್ ನೀಡಿದ್ದಾರೆ. ಸಿಡ್ನಿಯ ಬೋಂಡಿ...

ಜಲಪಾತದಲ್ಲಿ ಸೆಲ್ಫಿ ತೆಗೆದುಕೊಳ್ಳುವಾಗ ದುರಂತ: ನಾಲ್ವರು ಯುವತಿಯರ ಸಾವು

newsics.com ಬೆಳಗಾವಿ: ಕರ್ನಾಟಕ- ಮಹಾರಾಷ್ಟ್ರ ಗಡಿಯಲ್ಲಿ ಇರುವ ಕಿತವಾಡ ಜಲಪಾತದ ಬಳಿ ಭಾರೀ ದುರಂತ ಸಂಭವಿಸಿದೆ. ಸೆಲ್ಫಿ ತೆಗೆಯುವ ವೇಳೆ ನಾಲ್ವರು ಯುವತಿಯರು ಕಾಲು ಜಾರಿ ಬಿದ್ದು ಮೃತಪಟ್ಟಿದ್ದಾರೆ. ಓರ್ವ ಯುವತಿ ಗಂಭೀರವಾಗಿ ಗಾಯಗೊಂಡಿದ್ದಾರೆ....

ಪೊಲೀಸರಿಂದ ಶಂಕಿತ ಭಯೋತ್ಪಾದಕ ಶಾರೀಕ್ ಗೆಳತಿಯ ವಿಚಾರಣೆ

newsics.com ಬೆಂಗಳೂರು: ಶಂಕಿತ ಭಯೋತ್ಪಾದಕ ಶಾರೀಕ್ ನ ಮೊಬೈಲ್ ನಲ್ಲಿ ಸ್ಫೋಟಕ ಮಾಹಿತಿ ದೊರೆತಿದೆ. ಶಾರೀಕ್  ಬೆಂಗಳೂರಿನಲ್ಲಿ ಗರ್ಲ್ ಫ್ರೆಂಡ್ ಜತೆ ಸುತ್ತಾಡುತ್ತಿದ್ದ ಎಂಬ ಅಂಶ ಬಯಲಾಗಿದೆ. ಶಾಪಿಂಗ್ ಹೆಸರಿನಲ್ಲಿ ಯುವತಿಯನ್ನು ಹೊರಗಡೆ ಕರೆದುಕೊಂಡು ಹೋಗುತ್ತಿದ್ದ...
- Advertisement -
error: Content is protected !!