newsics.com
ವಾಷಿಂಗ್ಟನ್: ಇದು ವಿಚಿತ್ರ ಘಟನೆ. ಆದರೂ ಸತ್ಯ. ಬೇಟೆಗೆ ಕಾರಿನಲ್ಲಿ ತೆರಳುತ್ತಿದ್ದ ವ್ಯಕ್ತಿಯೊಬ್ಬನನ್ನು ಸಾಕು ನಾಯಿ ಗುಂಡು ಹಾರಿಸಿ ಹತ್ಯೆ ಮಾಡಿದೆ. ಇದು ನಡೆದಿರುವುದು ಅಮೆರಿಕದಲ್ಲಿ.
ಮೃತಪಟ್ಟ ವ್ಯಕ್ತಿ ಕಾರಿನ ಮುಂದಿನ ಸೀಟ್ ನಲ್ಲಿ ಇದ್ದ. ಬಂದೂಕು ಮತ್ತು ನಾಯಿ ಹಿಂದಿನ ಸೀಟ್ ನಲ್ಲಿ. ನಾಯಿ ಬಂದೂಕಿನ ಮೇಲೆ ಕಾಲಿಟ್ಟಾಗ ಅದರಿಂದ ಗುಂಡು ಹಾರಿದೆ. ಅದು ವ್ಯಕ್ತಿಗೆ ತಗುಲಿ ಪ್ರಾಣ ಕಳೆದುಕೊಂಡಿದ್ದಾನೆ.
ಈ ಹಿಂದೆ 2018ರಲ್ಲಿ ಮೆಕ್ಸಿಕೋದಲ್ಲಿ ಕೂಡ ಇದೇ ರೀತಿಯ ಘಟನೆ ನಡೆದಿತ್ತು. ಅಮೆರಿಕದಲ್ಲಿ ಬಂದೂಕಿನಿಂದ ಗುಂಡು ಹಾರಿಸಿ ಹತ್ಯೆ ಮಾಡುವ ಪ್ರಕರಣ ಹೆಚ್ಚಾಗಿದ್ದು, ಪ್ರತಿವರ್ಷ 500 ಮಂದಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.
ಕೊನೆಯ ಕ್ಷಣದಲ್ಲಿ ಭಾರತ- ಪಾಕಿಸ್ತಾನ ಮಧ್ಯೆ ಅಣ್ವಸ್ತ್ರ ಯುದ್ದ ತಪ್ಪಿಸಿದ್ದ ಅಮೆರಿಕ