Wednesday, July 6, 2022

ಈ ಶೋಂ ರೂಂಗೆ ಡಾಗ್ ರಿಸೆಪ್ಷನಿಸ್ಟ್

Follow Us

ಮೊಬೈಲ್, ಕಾರು, ಬೈಕ್ ಯಾವ ಶೋಂ ರೂಂ ಇರಲಿ. ಅಲ್ಲಿನ ಪ್ರಮುಖ ಅಕರ್ಷಣೆ ತುಟಿಗೊಂದಿಷ್ಟು ರಂಗು ಬಳಿದು ಪಟ ಪಟನೆ ಮಾತನಾಡುವ ಲಲನೆಯರು. ಕಾರು ಬೈಕ್ ವ್ಯಾಪಾರವಾಗಲಿ ಬಿಡಲಿ ಹುಡುಗಿಯರಂತೂ ಇರಲೇ ಬೇಕು. ಆದರೆ ಇಲ್ಲೊಂದು ಕಾರು ಶೋಂ ರೂಂ ಮಾತ್ರ ರಿಸೆಪ್ಷನಿಸ್ಟ್ ಆಗಿ ಬೀದಿನಾಯಿಯನ್ನು ನೇಮಿಸಿಕೊಂಡು ಶೋಂ ರೂಂಗೆ ಭೇಟಿ ನೀಡುವ ಗ್ರಾಹಕರಿಗೆ ಶಾಕ್ ನೀಡುತ್ತಿದೆ.
ಅಷ್ಟಕ್ಕೂ ಈ ಶೋಂ ರೂಂ ಇರೋದೆಲ್ಲಿ ಗೊತ್ತಾ? ದೂರದ ಬ್ರೆಜಿಲ್‍ನಲ್ಲಿ. ಬ್ರೆಜಿಲ್‍ನ ಹುಂಡೈ ಸೆರಾ ಇಎಸ್ ಶೋಂ ರೂಂ ತಮ್ಮ ಸ್ವಾಗತಕಾರಿಣಿಯನ್ನಾಗಿ ನಾಯಿಯನ್ನು ನೇಮಿಸಿಕೊಂಡಿದ್ದು, ಠಾಕು ಠೀಕಾಗಿ ನಾಯಿಯು ಇವರ ರಿಸೆಪನ್ಸ್‍ನಲ್ಲಿ ಕುಳಿತ ಪೋಟೋಗಳು ಇದೀಗ ವಿಶ್ವದಾದ್ಯಂತ ವೈರಲ್ ಆಗಿದೆ. ಶಿಸ್ತಾಗಿ ಕೆಲಸ ಮಾಡೋ ಈ ನಾಯಿಗೆ ಐಡಿ ಕಾರ್ಡ ಕೂಡ ನೀಡಲಾಗಿದ್ದು, ಹೊತ್ತು ಹೊತ್ತಿಗೆ ನೀರು, ಹಾಲು, ಬಿಸ್ಕೆಟ್ ಹಾಗೂ ರೋಗನಿರೋಧಕ ಔಷಧಗಳನ್ನು ಕೊಡಲಾಗುತ್ತಂತೆ.
ನಾಯಿ ನಿಷ್ಠೆ ಹಾಗೂ ಪ್ರಾಮಾಣಿಕತೆಗೆ ಹೆಸರಾದ ಪ್ರಾಣಿ. ಹೀಗಾಗಿ ನಾವು ನಾಯಿಯನ್ನು ನೇಮಿಸಿಕೊಂಡಿದ್ದೇವೆ ಅಂತಿದೆ ಹುಂಡೈ ಶೋಂ ರೂಂ. ಕೇವಲ ನಾಯಿಯನ್ನು ನೇಮಿಸಿಕೊಂಡಿರೋದು ಮಾತ್ರವಲ್ಲದೇ ಹುಂಡೈ ಕಂಪನಿ ಆ ನಾಯಿಗೆ ಡಕ್ಸನ್ ಪ್ರೈಂ ಎಂಬ ಹೆಸರು ನೀಡಿದೆ. ಈ ಹೆಸರು ಹುಂಡೈನ ಪ್ರಸಿದ್ಧ ಕಾರು ಮಾದರಿಯದ್ದಾಗಿದ್ದು, ಅಷ್ಟೊಂದು ವಿಶ್ವಾಸವನ್ನು ಈ ಕಂಪನಿ ನಾಯಿ ಮೇಲೆ ಹೊಂದಿದೆ.
ಬ್ರೆಜಿಲ್‍ನ ಸೆರಾ ಶೋಂ ರೂಂ ಈ ಹೊಸ ಬಗೆಯ ರಿಸೆಪ್ಷನಿಸ್ಟ್ ಗೆ ಗ್ರಾಹಕರು ಕೂಡ ಅಷ್ಟೇ ಖುಷಿಯಾಗಿ ರಿಯಾಕ್ಟ್ ಮಾಡುತ್ತಿದ್ದಾರಂತೆ. ಅಷ್ಟೇ ಅಲ್ಲ ಐಡಿ ಕಾರ್ಡ ಧರಿಸಿ ಕೂತಿರೋ ಈ ನಾಯಿ ಜೊತೆ ಸೆಲ್ಪಿ ತೆಗೆಸಿಕೊಂಡು ಸಂಭ್ರಮಿಸುತ್ತಿದ್ದಾರಂತೆ. ಸೋಷಿಯಲ್ ಮೀಡಿಯಾದಲ್ಲೂ ಸೆರಾ ಶೋಂ ರೂಂ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗುತ್ತಿದ್ದು, ನಾಯಿಪ್ರಿಯರಂತೂ ಸಖತ್ ಖುಷಿಯಾಗಿದ್ದಾರೆ. ಸಧ್ಯದಲ್ಲೇ ಇಂತಹದೊಂದು ಅಚ್ಚರಿಯ ವ್ಯವಸ್ಥೆ ಭಾರತಕ್ಕೆ ಕಾಲಿಟ್ಟರೂ ಆಶ್ಚರ್ಯವೇನು ಇಲ್ಲ. ಅಂದಹಾಗೆ ಈ ನಾಯಿಗೆ ಎಷ್ಟು ಸಂಬಳ ಕೊಡ್ತಿದ್ದಾರೆ ಅನ್ನೋದು ಮಾತ್ರ ಇನ್ನೂ ಗೊತ್ತಾಗಿಲ್ಲ.

ಮತ್ತಷ್ಟು ಸುದ್ದಿಗಳು

vertical

Latest News

ಚಾಕಲೇಟ್ ಕವರ್ ನಲ್ಲಿ ವಿದ್ಯಾರ್ಥಿಗಳಿಗೆ ಡ್ರಗ್ಸ್: ನಾಲ್ವರ ಸೆರೆ

newsics.com ಬೆಂಗಳೂರು:  ವಿದ್ಯಾರ್ಥಿಗಳಿಗೆ ಚಾಕಲೇಟ್ ಕವರ್ ನಲ್ಲಿ ಅಡಗಿಸಿ ಡ್ರಗ್ಸ್ ಪೂರೈಸುತ್ತಿದ್ದ ನಾಲ್ವರು ಆರೋಪಿಗಳನ್ನು ಬೆಂಗಳೂರಿನ  ಆವಲ ಹಳ್ಳಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು  ಮೊಹಮ್ಮದ್ ಅಸ್ಲಾಂ, ...

ಒಟಿಪಿ ನೀಡುವ ವಿಷಯಕ್ಕೆ ಜಗಳ: ಪ್ರಯಾಣಿಕನ ಹತ್ಯೆ ಮಾಡಿದ ಕ್ಯಾಬ್ ಚಾಲಕ

newsics.com ಚೆನ್ನೈ: ಕಾರನ್ನು ಬಾಡಿಗೆಗೆ ನಿಗದಿಪಡಿಸಿ ಪ್ರಯಾಣ ಆರಂಭಿಸುವ ಮೊದಲು ಒಟಿಪಿ ನೀಡುವ ಜಗಳ ಪ್ರಯಾಣಿಕನ ಕೊಲೆಯಲ್ಲಿ ಅಂತ್ಯವಾಗಿದೆ. ಚೆನ್ನೈ ನಗರದ ನವಲೂರಿನಲ್ಲಿ ಈ ಘಟನೆ ನಡೆದಿದೆ. ಸಾಫ್ಟವೇರ್ ಡೆವಲಪರ್ ಆಗಿರುವ...

ದೇಶದಲ್ಲಿ ಹೊಸದಾಗಿ 16,159 ಮಂದಿಗೆ ಕೊರೋನಾ ಸೋಂಕು, 28 ಜನರ ಸಾವು

newsics.com ನವದೆಹಲಿ:  ದೇಶದಲ್ಲಿ ಕೊರೋನಾದ ಹಾವಳಿ ಮುಂದುವರಿದಿದೆ.  ಕಳೆದ 24 ಗಂಟೆ ಅವಧಿಯಲ್ಲಿ ಹೊಸದಾಗಿ 16,159 ಮಂದಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಇದೇ ವೇಳೆ ಕೊರೋನಾ ಸೋಂಕಿತರಾಗಿದ್ದ 15,394 ಮಂದಿ ಗುಣಮುಖರಾಗಿದ್ದಾರೆ. ಕೊರೋನಾದಿಂದ ಕಳೆದ 24 ಗಂಟೆ...
- Advertisement -
error: Content is protected !!