Sunday, May 29, 2022

ಇಲ್ನೋಡಿ, ನಾಯಿ ಸ್ಕೇಟಿಂಗ್ ಮಾಡ್ತಿದೆ…!

Follow Us

newsics.com
ನ್ಯೂಯಾರ್ಕ್: ಸ್ಕೇಟಿಂಗ್‌ ತುಂಬ ರೋಮಾಂಚನಕಾರಿ ಹಾಗೂ ಅಷ್ಟೇ ಅಪಾಯಕಾರಿ ಕ್ರೀಡೆ. ಮನುಷ್ಯರೇ ಈ ಸ್ಕೇಟಿಂಗ್ ಪ್ರ್ಯಾಕ್ಟೀಸ್ ‌ಮಾಡಲು ಕಷ್ಟಪಡ್ತಾರೆ. ಆದರೆ ಇಲ್ಲೊಂದು ಮುದ್ದಾದ ನಾಯಿ ಮರಿ ಮಾತ್ರ ಸ್ಕೇಟಿಂಗ್ ಮೇಲೆ ಮನುಷ್ಯರಂತೆ ಬ್ಯಾಲೆನ್ಸ್ ಮಾಡುತ್ತಾ ರಸ್ತೆಗಿಳಿದಿದ್ದು ಲಕ್ಷಾಂತರ ನೆಟ್ಟಿಗರ ಮೆಚ್ಚುಗೆ ಪಡೆದಿದೆ.
ಅಮೆರಿಕದ ಮಾಜಿ ಬಾಸ್ಕೆಟ್ ಬಾಲ್ ಆಟಗಾರ ರೆಕ್ಸ್ ಛಾಪನ್ ಈ 36 ಸೆಕೆಂಡ್ ನ ವಿಡಿಯೋ ಶೇರ್ ಮಾಡಿದ್ದು, ಇದರಲ್ಲಿ ಮುದ್ದಾದ ನಾಯಿಮರಿಯೊಂದು ಮನುಷ್ಯರು ನಾಚಿಕೊಳ್ಳುವಂತೆ ಸ್ಕೇಟಿಂಗ್ ಮಾಡುತ್ತಿದೆ.
ನೇರವಾದ ರಸ್ತೆಯಲ್ಲಿ ಸ್ಕೇಟಿಂಗ್ ಮಾಡುವ ಈ ನಾಯಿ ಬಳಿಕ ಸಿಗ್ನಲ್’ನಲ್ಲಿ ತನ್ನ ಎಡಕ್ಕೆ ತಿರುಗಿ ಒಂದು ಫರ್ಪೆಕ್ಟ್ ಟರ್ನ್ ಕೂಡ ತೆಗೆದುಕೊಳ್ಳುವ ಮೂಲಕ ನೋಡುಗರ ಮನ ಸೆಳೆಯುತ್ತದೆ.
ನಾಯಿ ಸ್ಕೇಟಿಂಗ್ ಬೋರ್ಡ್ ಮೇಲೆ ಜುಮ್ ಅಂತಾ ಪ್ಲೈ ಮಾಡ್ತಿದ್ದರೆ ರಸ್ತೆಯ ಅಕ್ಕಪಕ್ಕದಲ್ಲಿರುವವರು ಬೆಕ್ಕಸ ಬೆರಗಾಗಿ ಈ ದೃಶ್ಯ ಕಣ್ತುಂಬಿಕೊಳ್ತಿದ್ದಾರೆ.
ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಂತೂ ಮೆಚ್ಚುಗೆಯ ಮಹಾಪೂರವನ್ನೇ ಪಡೆದಿದ್ದು 576.5k ನಷ್ಟು ಜನರು ವೀಕ್ಷಿಸಿದ್ದಾರೆ.

https://twitter.com/i/status/1304436660705337344

30 ವರ್ಷ 3 ಕಿ.ಮೀ. ಕಾಲುವೆ ತೋಡಿ ನೀರು ಹರಿಸಿದ ಆಧುನಿಕ ಭಗೀರಥ!

ಸೈಕ್ಲಿಂಗ್ ವೇಳೆ ಹೃದಯಾಘಾತ; ಮಾಜಿ ಶಾಸಕರ ಪುತ್ರ ಸಾವು

ಕಾಶ್ಮೀರ ಸೇಬು ಉತ್ಪಾದನೆಯಲ್ಲಿ ಭಾರೀ ಕುಸಿತ

ಮತ್ತಷ್ಟು ಸುದ್ದಿಗಳು

Latest News

ಪೋಲೀಸ್ ಠಾಣೆಗಳಲ್ಲಿ ಸಿಸಿಟಿವಿ ಆಡಿಯೋ ಕಡ್ಡಾಯ: ದೆಹಲಿ ಹೈಕೋರ್ಟ್

newsics.com ನವದೆಹಲಿ: ಪೋಲೀಸ್ ಠಾಣೆಯಲ್ಲಿ ಸಿಸಿಟಿವಿ ವಿಡಿಯೋ ಜೊತೆ ಆಡಿಯೋ ಕೂಡ ಇರಬೇಕೆಂದು ದೆಹಲಿ ಹೈಕೋರ್ಟ್ ಹೇಳಿದೆ. ದೆಹಲಿ ಹೈಕೋರ್ಟ್ ಆದೇಶ ಹೊರಡಿಸಿದ್ದು, ಪೋಲೀಸ್ ಠಾಣೆಯ ಎಲ್ಲಾ ಕಡೆಗಳಲ್ಲೂ...

ಎಂ.ಕರುಣಾನಿಧಿ ಕಂಚಿನ ಪ್ರತಿಮೆ ಅನಾವರಣ

newsics.com ಚೆನ್ನೈ: ಐದು ಬಾರಿ ತಮಿಳುನಾಡಿನಲ್ಲಿ ಮುಖ್ಯಮಂತ್ರಿಯಾಗಿದ್ದ ದಿವಂಗತ ಎಂ.ಕರುಣಾನಿಧಿ ಅವರ 16 ಅಡಿ ಎತ್ತರದ ಕಂಚಿನ ಪ್ರತಿಮೆಯನ್ನು ಉಪರಾಷ್ಟ್ರಪತಿ ಎಂ. ವೆಂಕಯ್ಯನಾಯ್ಡು ಅನಾವರಣಗೊಳಿಸಿದರು. ಈ ಮೊದಲೇ ಪ್ರತಿಮೆ ನಿರ್ಮಿಸಿದ್ದು, ಅದನ್ನು ಧ್ವಂಸಗೊಳಿಸಲಾಗಿತ್ತು. ಅದೇ ಪ್ರತಿಮೆ...

ಜಾಕ್ವೆಲಿನ್ ಫರ್ನಾಂಡಿಸ್‌ಗೆ ವಿದೇಶಕ್ಕೆ ತೆರಳಲು ಇಡಿ ಅನುಮತಿ

newsics.com ನವದೆಹಲಿ: ನಟಿ ಜಾಕ್ವೆಲಿನ್ ಫರ್ನಾಂಡಿಸ್ ಅವರಿಗೆ ವಿದೇಶಕ್ಕೆ ತೆರಳಲು ಇಡಿ ಅನುಮತಿ ನೀಡಿದೆ. ಸುಖೇಶ್ ಚಂದ್ರಶೇಖರ್ ವಿರುಧ್ದದ ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯವು ಅವರನ್ನು ವಿಚಾರಣೆಗೆ ಒಳಪಡಿಸಿತ್ತು. ಸುಖೇಶ್ ಚಂದ್ರಶೇಖರ್ ಅವರೊಂದಿಗೆ ಜಾಕ್ವೆಲಿನ್ ಅವರಿಗೆ...
- Advertisement -
error: Content is protected !!