newsics.com
ದುಬೈ: ಕೊರೋನಾ ಸೋಂಕಿತ ಪ್ರಯಾಣಿಕನಿಗೆ ವಿಮಾನದಲ್ಲಿ ಪ್ರಯಾಣಿಸಲು ಅನುಮತಿ ನೀಡಿರುವ ಹಿನ್ನೆಲೆಯಲ್ಲಿ ದುಬೈ ನಾಗರಿಕ ವಿಮಾನಯಾನ ನಿರ್ದೇಶನಾಲಯ ಭಾರತದ ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನದ ಮೇಲೆ ನಿರ್ಬಂಧ ವಿಧಿಸಿದೆ. ಇಂದಿನಿಂದ 15 ದಿನಗಳ ಕಾಲ ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನ ದುಬೈಗೆ ಬರುವುದನ್ನು ಈ ಮೂಲಕ ತಡೆಹಿಡಿಯಲಾಗಿದೆ.
ಈ ಹಿನ್ನೆಲೆಯಲ್ಲಿ ದುಬೈಯಿಂದ ಹೊರಡುವ ಎಲ್ಲ ವಿಮಾನಗಳು ಶಾರ್ಜಾದಿಂದ ಪ್ರಯಾಣ ಆರಂಭಿಸಲಿವೆ. ಇದರಿಂದ ಲಕ್ಷಾಂತರ ಭಾರತೀಯರು ತೊಂದರೆ ಅನುಭವಿಸಲಿದ್ದಾರೆ. ಎರಡು ಬಾರಿ ಕೊರೋನಾ ಸೋಂಕಿತ ಪ್ರಯಾಣಿಕರು ವಿಮಾನದಲ್ಲಿ ದುಬೈಗೆ ಆಗಮಿಸಿದ್ದಾರೆ ಎಂದು ದುಬೈ ಆಡಳಿತ ಆರೋಪಿಸಿದೆ.
ದುಬೈಗೆ ಆಗಮಿಸಿದ ಕೊರೋನಾ ಸೋಂಕಿತ ಪ್ರಯಾಣಿಕರನ್ನು ಇದೀಗ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಆಸ್ಪತ್ರೆ ವೆಚ್ಚವನ್ನು ಏರ್ ಇಂಡಿಯಾ ಹೊರಬೇಕು ಎಂದು ದುಬೈ ಆಡಳಿತ ಹೇಳಿದೆ.