NEWSICS.COM
ಫಿಲಿಪೈನ್ಸ್: ಫಿಲಿಪೈನ್ಸ್ನ ಮಿಂಡೊರೊ ಪ್ರದೇಶದಲ್ಲಿ ಬೆಳಗಿನ ಜಾವ 5.13ರ ಹೊತ್ತಿಗೆ 6.3 ತೀವ್ರತೆಯ ಭೂಕಂಪ ಸಂಭವಿಸಿದೆ. ಈ ಕುರಿತು ಯುರೋಪಿಯನ್ ಮೆಡಿಟರೇನಿಯನ್ ಭೂಕಂಪನ ಕೇಂದ್ರ (ಇಎಂಎಸ್ಸಿ) ಶುಕ್ರವಾರ ತಿಳಿಸಿದೆ.
ಭೂಕಂಪನವು 144 ಕಿ.ಮೀ (89 ಮೈಲಿ) ಆಳದಲ್ಲಿ ಸಂಭವಿಸಿದೆ ಎಂದು ಇಎಂಎಸ್ಸಿ ತಿಳಿಸಿದೆ. ಫಿಲಿಪೈನ್ಸ್’ನ ರಾಜಧಾನಿ ಮನಿಲಾದಲ್ಲಿ ಕಂಪನದ ಹೊಡೆತಕ್ಕೆ ಕಟ್ಟಡಗಳು ಉರುಳಿದ್ದು, ಸೇತುಗಳು ದ್ವಂಸವಾಗಿದೆ ಎನ್ನಲಾಗಿದ್ದು ಸಾವಿನ ಬಗ್ಗೆ ವರದಿಯಾಗಿಲ್ಲ. ಭೂಕಂಪನ ಕೇಂದ್ರವು ಎಚ್ಚರಿಕೆಯಿಂದ ಇರಲು ಸೂಚಿಸಲಾಗಿದೆ ಎಂದು ತಿಳಿದು ಬಂದಿದೆ.