ವಾಷಿಂಗ್ಟನ್: ದಕ್ಷಿಣ ಏಷ್ಯಾದಲ್ಲಿ ಆರ್ಥಿಕ ಪ್ರಗತಿ ಹೆಚ್ಚು ಕುಂಠಿತಗೊಂಡಿರುವುದು ಭಾರತ ಮತ್ತು ಪಾಕಿಸ್ತಾನದಲ್ಲಿ ಮಾತ್ರ ಎಂದು ವಿಶ್ವಬ್ಯಾಂಕ್ ಹೇಳಿದೆ.
ದಕ್ಷಿಣ ಏಷ್ಯಾದ ಆರ್ಥಿಕ ಪ್ರಗತಿ 2019ರಲ್ಲಿ ಶೇ.4.9 ರಷ್ಟು ಕುಸಿದಿದೆ. ಆದರೆ ಅದಕ್ಕೂ ಹಿಂದಿನ ವರ್ಷ ಪ್ರಗತಿಯ ಪ್ರಮಾಣ 7.1ರಷ್ಟಿತ್ತು. ಪ್ರಮುಖವಾಗಿ ಭಾರತ-ಪಾಕಿಸ್ತಾನದಲ್ಲಿ ಪ್ರಗತಿ ಪ್ರಮಾಣ ಗಣನೀಯವಾಗಿ ಕುಸಿದಿದೆ ಎಂದು ವಿಶ್ವಬ್ಯಾಂಕ್ ಜಾಗತಿಕ ಆರ್ಥಿಕ ಮುನ್ನೋಟದಲ್ಲಿ ಸ್ಪಷ್ಟಪಡಿಸಿದೆ.
ಭಾರತದಲ್ಲಿ ಕಳೆದ ವರ್ಷ ಆರ್ಥಿಕ ಚಟುವಟಿಕೆಗಳು ತೀರಾ ನಿಧಾನವಾಗಿವೆ. ತಯಾರಿಕೆ ಮತ್ತು ಕೃಷಿ ಕ್ಷೇತ್ರಗಳಿಗೆ ದೊಡ್ಡ ಪೆಟ್ಟು ಬಿದ್ದಿದೆ. ನಿರುದ್ಯೋಗ ಹೆಚ್ಚಿದೆ ಎಂದು ವರದಿಯಲ್ಲಿ ಹೇಳಿದೆ. ವಿಶ್ವಬ್ಯಾಂಕ್ 2020-21ರ ಹಣಕಾಸು ವರ್ಷದಲ್ಲಿ ಭಾರತದ ಜಿಡಿಪಿ ಬೆಳವಣಿಗೆಯನ್ನು 5 ಪರ್ಸೆಂಟ್‌ಗೆ ಇಳಿಸಿದೆ.
ಭಾರತ, ಪಾಕ್ ನಲ್ಲಿ ಆರ್ಥಿಕ ಪ್ರಗತಿ ಕುಸಿತ; ವಿಶ್ವ ಬ್ಯಾಂಕ್
Follow Us