ಜಾಂಬಿಯಾ: ಇಲ್ಲಿನ ಲುವಾಂಗ್ವಾ ರಾಷ್ಟ್ರೀಯ ಉದ್ಯಾನವನದಲ್ಲಿ ಅನೆಯೊಂದು ಐದು ಅಡಿ ಎತ್ತರದ ನಾಜೂಕಿನಿಂದ ದಾಟಿರುವ ವಿಡಿಯೋ ಈಗ ವೈರಲ್ ಆಗಿದೆ.
ಗೋಡೆ ಅಷ್ಟು ಬಲಿಷ್ಟವಲ್ಲದಿದ್ದರೂ ಗೋಡೆಯನ್ನು ಕೆಡವಬಾರದು ಎಂಬ ಎಚ್ಚರಿಕೆಯಿಂದ ಗೋಡೆ ದಾಟಿರುವ ಆನೆಯ ಸೂಕ್ಷ್ಮತೆ ಹಲವರ ಹುಬ್ಬೇರಿಸಿದೆ.
ಆನೆ ಈ ನಯ ನಾಜೂಕು ಪ್ರದರ್ಶಿಸಿದ್ದು ಮಾವಿನಹಣ್ಣುಗಳಿಗಾಗಿ ಎಂದು ಗೊತ್ತಾಗಿದೆ. ಮಾವಿನಹಣ್ಣಿನ ಸೀಸನ್ನಲ್ಲಿ ಆನೆಗಳು ಇಲ್ಲಿಗೆ ಬರುವುದು ಸಾಮಾನ್ಯ. ಆದರೆ ಅಲ್ಲಿ ಮಾವಿನಹಣ್ಣು ಇರಲಿಲ್ಲ. ಈ ಆನೆ ತುಂಬ ತಡಮಾಡಿಬಿಟ್ಟಿದೆ ಎಂದು ಸ್ಥಳೀಯ ಮಾಧ್ಯಮವೊಂದು ವರದಿ ಮಾಡಿದೆ.
ನಾಜೂಕಿನಿಂದ ಗೋಡೆ ದಾಟಿದ ಆನೆ!
Follow Us