newsics.com
ಸ್ಯಾನ್ ಫ್ರಾನ್ಸಿಸ್ಕೋ: ಅಮೆರಿಕದ ಲೇಖಕ ಮತ್ತು ಪತ್ರಕರ್ತ ವಾಲ್ಟರ್ ಐಸಾಕ್ಸನ್ ಅವರು ಬರೆದ ಮಸ್ತ್ ಅವರ ಜೀವನಾಧಾರಿತವಾದ ‘ಎಲೋನ್ ಮಸ್ಕ್’ ಶೀರ್ಷಿಕೆಯ ಜೀವನಚರಿತ್ರೆ ಗ್ರಂಥವು ಬಿಡುಗಡೆಯಾದ ಮೊದಲ ವಾರದಲ್ಲಿಯೇ ಅತ್ಯಧಿಕ ಮಾರಾಟ ಕಂಡಿದೆ. ಮೊದಲ ವಾರದಲ್ಲಿಯೇ ಇದರ 92,560 ಪ್ರತಿಗಳು ಮಾರಾಟವಾಗಿವೆ. ಪುಸ್ತಕ ಟ್ರ್ಯಾಕರ್ ಸಿರ್ಕಾನಾ ಬುಕ್ ಸ್ಕ್ಯಾನ್ ಸಂಸ್ಥೆಯು ಸಂಗ್ರಹಿಸಿದ ಮಾಹಿತಿಯ ಪ್ರಕಾರ, ಟೆಸ್ಲಾ ಸಂಸ್ಥಾಪಕ ಮತ್ತು ಎಕ್ಸ್ ( ಟ್ವಿಟರ್)ನ ಮಾಲೀಕರಾಗಿರುವ ಎಲೋನ್ ಮಸ್ಕ್ ಅವರ ಜೀವನಚರಿತ್ರೆ ಗ್ರಂಥವು ಸೆಪ್ಟೆಂಬರ್ 16 ರವರೆಗೆ ಮುದ್ರಿತ ಪ್ರತಿಗಳನ್ನು ಒಳಗೊಂಡಂತೆ ದಾಖಲೆಯ ಮಾರಾಟಕ್ಕೆ ಸಾಕ್ಷಿಯಾಗಿದೆ.
ಆತ್ಮಚರಿತ್ರೆಯನ್ನು ಬರೆಯಲು ಪತ್ರಕರ್ತ ವಾಲ್ಟರ್ ಐಸಾಕ್ಸನ್ ಸುಮಾರು 2 ವರ್ಷಗಳ ಕಾಲ ಮಸ್ಕ್ ಅವರೊಂದಿಗೆ ಸತತವಾಗಿ ಸಂಪರ್ಕದಲ್ಲಿದ್ದರು. ಈ ಎರಡು ವರ್ಷಗಳ ಅವಧಿಯಲ್ಲಿ ಐಸಾಕ್ಸನ್ ಮಸ್ಕ್ ಅವರ ಸಭೆಗಳಿಗೆ ಹಾಜರಾಗುತ್ತಿದ್ದರು, ಅವರ ಕಾರ್ಖಾನೆ ಹಾಗೂ ಆಫೀಸುಗಳಲ್ಲಿ ಸುತ್ತಾಡುತ್ತಿದ್ದರು ಮತ್ತು ಅವರ ಆಪ್ತರು, ಕುಟುಂಬಸ್ಥರು, ಸಹೋದ್ಯೋಗಿಗಳನ್ನು ಮಾತನಾಡಿಸಿ ಮಾಹಿತಿ ಪಡೆಯುತ್ತಿದ್ದರು.
‘ಎಲೋನ್ ಮಸ್ಕ್’ ಗ್ರಂಥವು ದಿ ನ್ಯೂಯಾರ್ಕ್ ಟೈಮ್ಸ್ ನ ಬೆಸ್ಟ್ ಸೆಲ್ಲರ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಇದು ಅಮೆಜಾನ್‌ನಲ್ಲಿಯೂ ಬೆಸ್ಟ್ ಸೆಲ್ಲರ್ ಆಗಿದ್ದು, $ 20.99 ಗೆ ಮಾರಾಟವಾಗುತ್ತಿದೆ. ಪುಸ್ತಕವು ಮಸ್ತ್ ಅವರ ಜೀವನದ ಹಲವಾರು ಅಂಶಗಳನ್ನು ಬಹಿರಂಗಪಡಿಸಿದೆ. ಅವರು ಹಲವಾರು ಮಹಿಳೆಯರೊಂದಿಗೆ ಇಟ್ಟುಕೊಂಡಿದ್ದ ಪ್ರಣಯ ಸಂಬಂಧಗಳ ಮಾಹಿತಿ ಇದರಲ್ಲಿವೆ.
ಮತ್ತೊಂದು ಭಯಾನಕ ವೈರಸ್ ಎದುರಿಸಲು ಸಜ್ಜಾಗಿ; ಚೀನಾ ವೈರಾಲಜಿಸ್ಟ್ ಎಚ್ಚರಿಕೆ!