Newsics.com
ವಾಷಿಂಗ್ಟನ್: ಅಮೆರಿಕದ ನೂತನ ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವ ಕಮಲಾ ಹ್ಯಾರಿಸ್ ಅಮೆರಿಕದ ಕಟು ವಾಸ್ತವ ಚಿತ್ರಣವನ್ನು ತಮ್ಮ ಟ್ವೀಟ್ ಮೂಲಕ ಅನಾವರಣಗೊಳಿಸಿದ್ದಾರೆ.
ಅಮೆರಿಕದಲ್ಲಿ ಲಕ್ಷಾಂತರ ಮಂದಿ ನಿರುದ್ಯೋಗಿಗಳಾಗಿದ್ದಾರೆ. ಮನೆ ಬಾಡಿಗೆ ನೀಡಲು ಮತ್ತು ಆಹಾರ ಸಿದ್ದಪಡಿಸಲು ಅವರ ಬಳಿ ಹಣ ಇಲ್ಲ. ಈ ಸಂತ್ರಸ್ತರ ಸಹಾಯಕ್ಕೆ ಹೆಚ್ಚಿನ ಕ್ರಮ ತೆಗೆದುಕೊಳ್ಳಬೇಕಾಗಿದೆ. ಇದರಲ್ಲಿ ಸಂಶಯವೇ ಇಲ್ಲ ಎಂದು ಕಮಲಾ ಹ್ಯಾರಿಸ್ ಹೇಳಿದ್ದಾರೆ.
ಅಮೆರಿಕದ ಆರ್ಥಿಕತೆ ಅತ್ಯಂತ ಗಂಭೀರ ಸವಾಲು ಎದುರಿಸುತ್ತಿದೆ. ನಿರುದ್ಯೋಗ ಪ್ರಮಾಣ ದಾಖಲೆ ಮಟ್ಟ ತಲುಪಿದೆ. ಕೊರೋನಾದಿಂದ ಆರ್ಥಿಕತೆ ಕೂಡ ಹಳಿ ತಪ್ಪಿದೆ.
ಕಮಲಾ ಹ್ಯಾರಿಸ್ ಈ ಅಭಿಪ್ರಾಯ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಅಮೆರಿಕ, ತನ್ನ ಪ್ರಜೆಗಳಿಗೆ ಮೊದಲು ನೌಕರಿ ಎಂಬ ನೀತಿಯನ್ನು ಇನ್ನಷ್ಟು ಬಿಗಿಯಾಗಿ ಜಾರಿಗೊಳಿಸುವ ಸಾಧ್ಯತೆ ಹೆಚ್ಚಾಗಿದೆ.