newsics.com
ಟೆಹರಾನ್: ವ್ಯಕ್ತಿಯೊಬ್ಬನನ್ನು ಹತ್ಯೆಗೈದ ಆರೋಪದ ಮೇಲೆ ಅಂತಾರಾಷ್ಟ್ರೀಯ ಕುಸ್ತಿಪಟು ನವೀದ್ ಅಫ್ಕಾರಿ(27)ಯನ್ನು ಗಲ್ಲಿಗೇರಿಸಲಾಗಿದೆ ಎಂದು ಹಸನ್ ರೊಹಾನಿ ನೇತೃತ್ವದ ಇರಾನ್ ಸರ್ಕಾರ ಅಧಿಕೃತವಾಗಿ ಪ್ರಕಟಣೆ ಹೊರಡಿಸಿದೆ. ಕುಸ್ತಿಪಟುವಿಗೆ ಗಲ್ಲು ಶಿಕ್ಷೆ ನೀಡದಂತೆ ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿದ್ದ ಸಲಹೆಯನ್ನು ಪಕ್ಕಕ್ಕೆ ಸರಿಸಿ, ತನ್ನ ಕಾನೂನಿನಂತೆ ಇರಾನ್ ನಡೆದುಕೊಂಡಿದೆ.
ಶಿರಾಜ್ ಜೈಲಿನಲ್ಲಿದ್ದ ನವೀದ್ ಅಫ್ಕಾರಿಯನ್ನು ಅದೇ ಜೈಲಿನಲ್ಲಿ ಗಲ್ಲಿಗೇರಿಸಲಾಗಿದೆ. 2018ರಲ್ಲಿ ಶಿರಾಝ್ ಪ್ರದೇಶದಲ್ಲಿ ನಡೆದ ಸರ್ಕಾರಿ ವಿರೋಧಿ ಪ್ರತಿಭಟನೆ ವೇಳೆ ಭದ್ರತಾ ಸಿಬ್ಬಂದಿಯನ್ನು ಹತ್ಯೆಗೈದ ಆರೋಪವನ್ನು ನವೀದ್ ಒಪ್ಪಿಕೊಂಡಿದ್ದಾನೆ. ಅಫ್ಕಾರಿ ಸೋದರ ವಹೀದ್(54) ಹಾಗೂ ಅಫ್ಕಾರಿ(27)ರನ್ನು ನೇಣಿಗೇರಿಸಲಾಗಿದೆ ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.
ಸುಮಾರು 85,000 ಅಥ್ಲೀಟ್’ಗಳುಳ್ಳ ಯೂನಿಯನ್’ನಿಂದ ಕುಸ್ತಿಪಟು ನವೀದ್ ಗಲ್ಲಿಗೇರಿಸುವುದಕ್ಕೆ ವಿರೋಧ ವ್ಯಕ್ತವಾಗಿತ್ತು.
ಕಾನೂನು ಪದವಿ ವ್ಯಾಸಂಗ; ಕೋರ್ಟ್ ಮೆಟ್ಟಿಲೇರಿದ 77ರ ಅಜ್ಜಿ!
ಇಲ್ನೋಡಿ, ನಾಯಿ ಸ್ಕೇಟಿಂಗ್ ಮಾಡ್ತಿದೆ…!