newsics.com
ರಿಯಾದ್: ಸೌದಿಯ ವಿಮಾನ ನಿಲ್ದಾಣದಲ್ಲಿ ಡ್ರೋಣ್ ನಲ್ಲಿ ಸ್ಫೋಟಕ ತುಂಬಿಸಿ ಸ್ಫೋಟ ನಡೆಸಲಾಗಿದೆ. ಸೌದಿಯ ದಕ್ಷಿಣ ನಗರ ಜಿಜಾನ್ ಕಿಂಗ್ ಅಬ್ದುಲ್ಲಾ ವಿಮಾನ ನಿಲ್ದಾಣದಲ್ಲಿ ಈ ಕೃತ್ಯ ಎಸಗಲಾಗಿದೆ.
ಸ್ಫೋಟದಲ್ಲಿ 10 ಮಂದಿ ಗಾಯಗೊಂಡಿದ್ದಾರೆ. ಇವರಲ್ಲಿ 6 ಸೌದಿ ನಾಗರಿಕರಾಗಿದ್ದಾರೆ. ಮೂವರು ಬಾಂಗ್ಲಾ ದವರಾಗಿದ್ದಾರೆ. ಓರ್ವ ಸುಡಾನ್ ನಾಗರಿಕನಾಗಿದ್ದಾನೆ.
ಯಾವುದೇ ಸಂಘಟನೆ ಈ ಕೃತ್ಯದ ಹೊಣೆ ಹೊತ್ತುಕೊಂಡಿಲ್ಲ. ಸೌದಿ ಅರಸರ ಧೋರಣೆ ವಿರೋಧಿಸಿ ಕೆಲವು ಉಗ್ರ ಸಂಘಟನೆಗಳು ಈ ಕೃತ್ಯ ಎಸಗಿವೆ ಎಂದು ಶಂಕಿಸಲಾಗಿದೆ