Wednesday, July 6, 2022

2021 ಜುಲೈ ತನಕ ಫೇಸ್ ಬುಕ್ ಸಿಬ್ಬಂದಿಗೆ ವರ್ಕ್ ಫ್ರಮ್ ಹೋಂ

Follow Us

ವಾಷಿಂಗ್ಟ್ ನ್: ಮಾರಕ ಕೊರೋನಾ ಹಿನ್ನೆಲೆಯಲ್ಲಿ ತನ್ನ ಸಿಬ್ಬಂದಿಗೆ ಮುಂದಿನ ವರ್ಷದ  ಜುಲೈ ತನಕ ಮನೆಯಿಂದಲೇ ಕೆಲಸ ನಿರ್ವಹಣೆಗೆ ಅವಕಾಶ ಮಾಡಿಕೊಡಲು ಫೇಸ್ ಬುಕ್ ನಿರ್ಧರಿಸಿದೆ. ಮನೆಯಲ್ಲಿ ಈ ಸಂಬಂಧ ಅಗತ್ಯ ಸೌಲಭ್ಯ ಏರ್ಪಡಿಸಲು 1000 ಡಾಲರ್ ನೀಡುವುದಾಗಿಯೂ ಅದು ಘೋಷಿಸಿದೆ.

ಸ್ಥಳೀಯ ಸರ್ಕಾರಗಳ ಆರೋಗ್ಯ ನೀತಿಗೆ ಅನುಗುಣವಾಗಿ ಸಂಸ್ಥೆ ಕಾರ್ಯ ನಿರ್ವಹಿಸಲಿದೆ. ಇದೇ ವೇಳೆ ಮುನ್ನೆಚ್ಚರಿಕಾ ಕ್ರಮವಾಗಿ ಸಿಬ್ಬಂದಿಗೆ ಮುಂದಿನ ವರ್ಷದ ಜುಲೈ ತಿಂಗಳ ತನಕ ಮನೆಯಿಂದಲೇ ಕರ್ತವ್ಯ ನಿರ್ವಹಣೆಗೆ ಅವಕಾಶ ದೊರೆಯಲಿದೆ ಎಂದು ಸಂಸ್ಥೆ ಹೇಳಿದೆ. ಇದೇ ವೇಳೆ ಲ್ಯಾಟಿನ್ ಅಮೆರಿಕ ದೇಶದಲ್ಲಿ ತಕ್ಷಣ ಕಚೇರಿ ಪುನರಾರಂಭದ ಸಾಧ್ಯತೆಯನ್ನು ಅದು ತಳ್ಳಿಹಾಕಿದೆ.

ಈ ಮೊದಲು ಗೂಗಲ್ ಕೂಡ ತನ್ನ ಸಿಬ್ಬಂದಿಗೆ ಇದೇ ರೀತಿಯ ಅವಕಾಶ ನೀಡಿತ್ತು. ವಿಶ್ವದಲ್ಲಿ ಮಾರಕ ಕೊರೋನಾ ನಿಯಂತ್ರಣಕ್ಕೆ ಬರಲು ಇನ್ನೂ ಆರು ತಿಂಗಳು ಬೇಕಾಗಲಿದೆ ಎಂಬ ವರದಿಗಳ ಮಧ್ಯೆ ಫೇಸ್ ಬುಕ್ ಈ ನಿರ್ಧಾರ ತೆಗೆದುಕೊಂಡಿದೆ.

ಮತ್ತಷ್ಟು ಸುದ್ದಿಗಳು

vertical

Latest News

ವೈಫ್ ಸ್ವ್ಯಾಪಿಂಗ್:ಪತ್ನಿಗೆ ಕಿರುಕುಳ ನೀಡುತ್ತಿದ್ದ ಉದ್ಯಮಿಯ ವಿರುದ್ಧ ಎಫ್ಐಆರ್ ದಾಖಲು

newsics.com ದೆಹಲಿ: ವೈಫ್ ಸ್ವ್ಯಾಪಿಂಗ್ ಪಾರ್ಟಿಗಳಿಗೆ ಹಾಜರಾಗುವಂತೆ ಪತ್ನಿಯನ್ನು  ಬಲವಂತಾಗಿ ಕರೆದೊಯ್ಯುತ್ತಿದ್ದ  ಗುರುಗ್ರಾಮ್ ಉದ್ಯಮಿಯೊಬ್ಬರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಉದ್ಯಮಿಯ ಪತ್ನಿ, ತಾನು ನಿರಾಕರಿಸಿದರೆ ತನ್ನ ಪತಿ  ಲೈಂಗಿಕ...

ಕೇಂದ್ರ ಸಚಿವರ ರಾಜೀನಾಮೆ: ಸ್ಮೃತಿ ಇರಾನಿ, ಸಿಂಧಿಯಾಗೆ ಹೆಚ್ಚುವರಿ ಖಾತೆಗಳ ಹೊಣೆ

newsics.com ನವದೆಹಲಿ: ಮುಖ್ತಾರ್ ಅಬ್ಬಾಸ್ ನಖ್ವಿ ಅವರ ರಾಜೀನಾಮೆಯ ನಂತರ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರಿಗೆ ಈಗಾಗಲೇ ಇರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆಯ ಜೊತೆಗೆ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯದ ಜವಾಬ್ದಾರಿಯನ್ನು...

ಫೈರಿಂಗ್ ರೇಂಜ್ ನಲ್ಲಿ ಆಕಸ್ಮಿಕ ಸ್ಫೋಟ: ಇಬ್ಬರು ಸೈನಿಕರಿಗೆ ಗಂಭೀರ ಗಾಯ

newsics.com ಶ್ರೀನಗರ: ಫೈರಿಂಗ್ ರೇಂಜ್ ನಲ್ಲಿ ಆಕಸ್ಮಿಕವಾಗಿ ಸ್ಫೋಟವಾದ ಹಿನ್ನೆಲೆ ಇಬ್ಬರು ಸೇನಾ ಸಿಬ್ಬಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿ ನಡೆದಿದೆ. ಪೂಂಚ್ ಜಿಲ್ಲೆಯ ಜುಲ್ಲಾಸ್ ಪ್ರದೇಶದಲ್ಲಿ ಸೈನಿಕರು ಫೈರಿಂಗ್...
- Advertisement -
error: Content is protected !!