newsics.com
ಇಸ್ಲಾಮಾಬಾದ್: ಪಾಕ್ ಸೇನಾ ಹೆಲಿಕಾಪ್ಟರ್ ಪತನಗೊಂಡು, ಅದರಲ್ಲಿದ್ದ ನಾಲ್ವರು ಸೇನಾ ಸಿಬ್ಬಂದಿ ಮೃತಪಟ್ಟಿದ್ದಾರೆ.
ಪಾಕಿಸ್ತಾನದ ಗಿಲ್ಗಿಟ್-ಬಾಲ್ಟಿಸ್ತಾನದಲ್ಲಿ ಭಾನುವಾರ ಈ ದುರಂತ ಸಂಭವಿಸಿದೆ. ತಾಂತ್ರಿಕ ಕಾರಣಗಳಿಂದಾಗಿ ಹೆಲಿಕಾಪ್ಟರ್ ಅಪಘಾತಕ್ಕೀಡಾಗಿರುವುದಾಗಿ ಪಾಕ್ ಸೇನೆಯ ಹೇಳಿಕೆ ತಿಳಿಸಿದೆ.
ಸೈನಿಕನೊಬ್ಬನ ಮೃತದೇಹವನ್ನು ಸ್ಕಾರ್ಡುವಿನಲ್ಲಿರುವ ಸೇನಾ ಆಸ್ಪತ್ರೆಗೆ ಸಾಗಿಸುತ್ತಿದ್ದಾಗ ಹೆಲಿಕಾಪ್ಟರ್ ಅಸ್ಟೋರ್ ಜಿಲ್ಲೆಯ ಮಿನಿಮಾರ್ಗ್ ಪ್ರದೇಶದಲ್ಲಿ ಪತನಗೊಂಡಿದೆ. ಹೆಲಿಕಾಪ್ಟರ್ನಲ್ಲಿದ್ದ ಪೈಲಟ್, ಸಹ ಪೈಲಟ್ ಹಾಗೂ ಇತರ ಇಬ್ಬರು ಸೈನಿಕರು ಸ್ಥಳದಲ್ಲೇ ಸಾವನ್ನಪ್ಪಿರುವುದಾಗಿ ಮೂಲಗಳು ತಿಳಿಸಿವೆ.
ಕೃಷಿ ಕಾಯ್ದೆ ವಿರೋಧಿಸಿ ಪಂಜಾಬ್ ವಕೀಲ ಆತ್ಮಹತ್ಯೆ
ಸಾಯಿಬಾಬಾ ಮಂದಿರದಲ್ಲಿ ಬೆಂಕಿ ದುರಂತ; ಇಬ್ಬರ ಸಾವು, ಓರ್ವನ ಸ್ಥಿತಿ ಗಂಭೀರ
ಶ್ರೀನಗರ ಹೈವೆಯಲ್ಲಿ ಗುಡ್ಡ ಕುಸಿತ; 250 ಕಿಮೀ ಉದ್ದ ನಿಂತ 1,500 ವಾಹನ!