newsics.com
ತೈವಾನ್: ಬೆಂಕಿ ಅವಘಡದಿಂದ 46 ಮಂದಿ ಸಜೀವ ದಹನಗೊಂಡು, 12ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ದುರ್ಘಟನೆ ದಕ್ಷಿಣ ತೈವಾನ್ ನಲ್ಲಿ ನಡೆದಿದೆ.
ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ರಕ್ಷಣಾ ಕಾರ್ಯ ಆರಂಭಿಸಿದ್ದಾರೆ. ಕೆಳ ಮಹಡಿಯಲ್ಲಿ ಹೊತ್ತಿಕೊಂಡ ಬೆಂಕಿ, ನೋಡನೋಡುತ್ತಿದ್ದಂತೆ ಇಡೀ ಕಟ್ಟಡವನ್ನೇ ಆಕ್ರಮಿಸಿದೆ.
ದುರ್ಘಟನೆಯಲ್ಲಿ ಕೆಲವರು ಸಜೀವ ದಹನಗೊಂಡಿದ್ದು, ಇನ್ನೂ ಕೆಲವರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. 12 ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಆರಂಭದಲ್ಲಿ ಸ್ಫೋಟದ ಸದ್ದು ಕೇಳಿಸಿದ್ದು, ಬಳಿಕ ಬೆಂಕಿ ಹೊತ್ತಿ ಉರಿದಿದೆ ಎಂದು ತಿಳಿದುಬಂದಿದೆ.