newsics.com
ಯುಎಸ್: ಏಳು ದಶಕಗಳ ನಂತರ ಅಮೆರಿಕದಲ್ಲಿ ಮಹಿಳೆಯೊಬ್ಬಳಿಗೆ ಮಾರಕ ಚುಚ್ಚುಮದ್ದು ನೀಡಿ ಮರಣದಂಡನೆ ಶಿಕ್ಷೆಯನ್ನು ನೀಡಲಾಗಿದೆ. ಬುಧವಾರ
ಬೆಳಿಗ್ಗೆ 1.31ರ ಹೊತ್ತಿಗೆ ಆಕೆಯ ಸಾವನ್ನು ದೃಢಪಡಿಸಲಾಗಿದೆ.
ಕಾನ್ಸಾನ್ನ ಲೀಸಾ ಮಾಂಟ್ಗೊಮೇರಿ (57) ಶಿಕ್ಷೆಗೆ ಗುರಿಯಾದ ಮಹಿಳೆ.
2004ರಲ್ಲಿ ಎಂಟು ತಿಂಗಳ ಗರ್ಭಿಣಿಯಾಗಿದ್ದ ಬಾಬ್ಬಿ ಜೋ ಸ್ಟಿನ್ನೆಟ್ರನ್ನು ಅಪಹರಿಸಿ ಕತ್ತು ಹಿಸುಕಿ, ಗರ್ಭದಲ್ಲಿದ್ದ ಹೆಣ್ಣುಮಗುವನ್ನು ಚಾಕುವಿನಿಂದ ಇರಿದು ಸಾಯಿಸಿದ್ದಕ್ಕಾಗಿ 2007 ರಲ್ಲಿ ಮಿಸೌರಿಯಲ್ಲಿ ಶಿಕ್ಷೆಗೊಳಪಡಿಸಲಾಗಿತ್ತು. ನಂತರ ಇಂಡಿಯಾನಾದ ಟೆರೆ ಹೋಟ್ನ ಜೈಲಿನಲ್ಲಿ ಈ ಶಿಕ್ಷೆಯನ್ನು ಜಾರಿಗೊಳಿಸಲಾಯಿತು.
ಶಿಕ್ಷೆಯ ನಂತರ ಲೀಸಾ ಪರ ವಕೀಲೆ ಕೆಲ್ಲಿ ಹೆನ್ರಿ, ಮರಣದಂಡನೆಯನ್ನು ತಡೆಯುವಲ್ಲಿ ಆಡಳಿತ ವಿಫಲವಾಗಿರುವುದು ಸಾಬೀತಾಗಿದೆ. ಮರಣದಂಡನೆ ನೀಡುವಾಗ ಇದ್ದವರೆಲ್ಲರೂ ತಲೆತಗ್ಗಿಸಬೇಕು ಎಂದಿದ್ದಾರೆ.