NEWSICS.COM
ರಷ್ಯಾ: ಮೀನುಗಾರಿಕೆಗೆಂದು ತೆರಳಿದ್ದ ದೋಣಿ ಮುಳುಗಿ 17 ಮೀನುಗಾರರು ನಾಪತ್ತೆಯಾದ ಘಟನೆ ರಷ್ಯಾದಲ್ಲಿ ನಡೆದಿದೆ.
ನೀರಿಗೆ ಹಾಕಿದ್ದ ಬಲೆ ಎಳೆಯುವಾಗ ಬಲವಾದ ಗಾಳಿ ಬೀಸಿದ ಪರಿಣಾಮ 19ಜನರಿದ್ದ ದೋಣಿ ಮುಳುಗಿದೆ. ಇಬ್ಬರು ಸುರಕ್ಷಿತವಾಗಿದ್ದು 17 ಜನ ಕಾಣೆಯಾಗಿದ್ದಾರೆ ಎಂದು ವರದಿಯಾಗಿದೆ. ಇಂದು ಒನೆಗಾ ಎಂಬ ಖಾಸಗಿ ಒಡೆತನದ ದೋಣಿ ಬ್ಯಾರೆಂಟ್ಸ್ ಸಮುದ್ರದ ನೊವಾಯಾ ಜೆಮ್ಲ್ಯಾ ದ್ವೀಪಸಮೂಹದ ಬಳಿ ಮುಳುಗಿದೆ ಎನ್ನಲಾಗಿದೆ.
ಬಲವಾದ ಗಾಳಿ ಮತ್ತು ಕನಿಷ್ಠ ತಾಪಮಾನ ಇರುವ ಕಾರಣ 17ಮಂದಿ ಬದುಕುಳಿದ ಸಾಧ್ಯತೆ ಕಡಿಮೆ ಇದೆ ಎಂದು ವರದಿಯಾಗಿದೆ.