Tuesday, April 13, 2021

ಫುಟ್‌ಬಾಲ್‌ ದಿಗ್ಗಜ ಇಂಗ್ಲೆಂಡ್‌ನ ಜಾಕ್‌ ನಿಧನ

ಲಂಡನ್‌: ಫುಟ್‌ಬಾಲ್‌ ಲೋಕದ ದಿಗ್ಗಜ ಇಂಗ್ಲೆಂಡ್‌ನ ಹಿರಿಯ ಆಟಗಾರ ಜಾಕ್‌ ಚಾರ್ಲ್‌ಟನ್‌ (85) ಶನಿವಾರ ನಿಧನರಾದರು.
1965ರಿಂದ 1970ರ ಅವಧಿಯಲ್ಲಿ ಆಂಗ್ಲರ ನಾಡಿನ ಪರ 35 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದ ಅವರು ಆರು ಗೋಲುಗಳನ್ನು ದಾಖಲಿಸಿದ್ದರು. ಆಷಿಂಗ್ಟನ್‌ನಲ್ಲಿ 1935 ಮೇ 8ರಂದು ಜನಿಸಿದ್ದ ಚಾರ್ಲ್‌ಟನ್ ಅವರು 1966ರ ವಿಶ್ವಕಪ್‌ನಲ್ಲಿ ಇಂಗ್ಲೆಂಡ್‌ ತಂಡದಲ್ಲಿ ಆಡಿದ್ದರು.
1986ರಿಂದ 1996ರವರೆಗೆ ಐರ್ಲೆಂಡ್‌ ತಂಡದ ಮುಖ್ಯ ಕೋಚ್‌ ಆಗಿ ಕಾರ್ಯನಿರ್ವಹಿಸಿದ್ದರು. ಫುಟ್‌ಬಾಲ್‌ ಬದುಕಿಗೆ ವಿದಾಯ ಹೇಳಿದ ಬಳಿಕ ಅವರು ಮಿಡಲ್‌ಬರೊ, ನ್ಯೂ ಕ್ಯಾಸ್ಟಲ್‌ ಯುನೈಟೆಡ್‌ ಮತ್ತು ಶೆಫೀಲ್ಡ್‌ ವೆಡ್ನೆಸ್‌ಡೇ ಕ್ಲಬ್‌ಗಳ ಮಾರ್ಗದರ್ಶಕರಾಗಿ ಕೆಲಸ ಮಾಡಿದ್ದರು. ಚಾರ್ಲ್‌ಟನ್ ಮಾರ್ಗದರ್ಶನದಲ್ಲಿ ತರಬೇತುಗೊಂಡಿದ್ದ ಐರ್ಲೆಂಡ್‌ ತಂಡ 1990ರ ವಿಶ್ವಕಪ್‌ನಲ್ಲಿ ಸೋಲನುಭವಿಸಿದ್ದರೂ, 1988ರ ಯುರೊ ಕಪ್‌ನಲ್ಲಿ ಇಂಗ್ಲೆಂಡ್‌ ಎದುರು ಸ್ಮರಣೀಯ ಗೆಲುವು ದಾಖಲಿಸಿತ್ತು. 1994ರ ವಿಶ್ವಕಪ್‌ನಲ್ಲಿ ಪ್ರೀ ಕ್ವಾರ್ಟರ್‌ ಫೈನಲ್‌ಗೆ ಲಗ್ಗೆ ಇಟ್ಟು ಗಮನ ಸೆಳೆದಿತ್ತು.

ಮತ್ತಷ್ಟು ಸುದ್ದಿಗಳು

Latest News

2 ಆಂಬುಲೆನ್ಸ್’ಗೆ ದಾರಿಮಾಡಿಕೊಟ್ಟ ಪ್ರಧಾನಿ‌ ಮೋದಿ

newsics.comಕೋಲ್ಕತಾ: ಪಶ್ಚಿಮ‌ ಬಂಗಾಳ ಚುನಾವಣೆ ಪ್ರಚಾರಕ್ಕಾಗಿ ರಸ್ತೆ ಮೂಲಕ ತೆರಳುತ್ತಿದ್ದ ಪ್ರಧಾನಿ ಮೋದಿ, ದಿಢೀರ್ 2 ಆಂಬುಲೆನ್ಸ್‌ಗೆ ದಾರಿ ಮಾಡಿಕೊಟ್ಟು ಎಲ್ಲರ ಮೆಚ್ಚುಗೆಗೆ...

ಕುರಾನ್’ನಲ್ಲಿನ 26 ವಚನ ತೆಗೆಯಬೇಕೆಂಬ ಅರ್ಜಿ ವಜಾಗೊಳಿಸಿದ ಸುಪ್ರೀಂ

newsics.comನವದೆಹಲಿ: ಕುರಾನ್‌ನಲ್ಲಿನ 26 ವಚನಗಳನ್ನು ತೆಗೆಯುವಂತೆ ಕೋರಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.ಅರ್ಜಿಯು ಗಂಭೀರ ಉದ್ದೇಶ ಹೊಂದಿಲ್ಲ ಎಂಬ ಕಾರಣಕ್ಕೆ ಅರ್ಜಿದಾರರಿಗೆ 50 ಸಾವಿರ ರೂ. ದಂಡ ವಿಧಿಸಿದೆ.ಉತ್ತರ ಪ್ರದೇಶದ...

ದೋಣಿ ಮುಳುಗಿ 34 ವಲಸಿಗರ ಸಾವು

newsics.comಜಿಬೂಟಿ: ವಲಸಿಗರನ್ನು ಹೊತ್ತ ದೋಣಿಯೊಂದು ಸಮುದ್ರದಲ್ಲಿ ಮುಳುಗಿ 34 ಮಂದಿ ಮೃತಪಟ್ಟಿದ್ದಾರೆ.ಆಫ್ರಿಕಾ ಖಂಡದ ಜಿಬೂಟಿ ದೇಶದ ಕರಾವಳಿಗೆ ಹೊಂದಿಕೊಂಡ ಪ್ರದೇಶದಲ್ಲಿ ಈ ದುರಂತ ಸಂಭವಿಸಿದೆ ಎಂದು ಅಂತಾರಾಷ್ಟ್ರೀಯ ವಲಸಿಗರ ಸಂಘಟನೆ...
- Advertisement -
error: Content is protected !!