newsics.com
ಬ್ರಿಟನ್ : 110 ಮಿಲಿಯನ್ ವರ್ಷಗಳ ಹಿಂದೆ ಬ್ರಿಟನ್ ಮಣ್ಣಿನಲ್ಲಿ ನಡೆದ ಕೊನೆಯ ಸಂತತಿಯ ಡೈನೋಸಾರ್‌ಗಳ ಹೆಜ್ಜೆ ಗುರುತು ಪತ್ತೆಯಾಗಿದೆ. ಕನಿಷ್ಠ ಆರು ವಿಭಿನ್ನ ಜಾತಿಯ ಡೈನೋಸಾರ್‌ಗಳ ಹೆಜ್ಜೆಗುರುತುಗಳು ಕೆಂಟ್ ಪ್ರದೇಶದಲ್ಲಿ ಕಂಡುಬಂದಿವೆ ಎಂದು ಸಂಶೋಧಕರ ಹೊಸ ವರದಿಯಲ್ಲಿ ಹೇಳಲಾಗಿದೆ ಎಂದು ವರದಿಯಾಗಿದೆ.
ಹೇಸ್ಟಿಂಗ್ಸ್ ಮ್ಯೂಸಿಯಂ ಆಂಡ್ ಆರ್ಟ್ ಗ್ಯಾಲರಿ ಕ್ಯುರೇಟರ್ ಮತ್ತು ಪೋರ್ಟ್ಸ್‌ಮೌತ್ ವಿಶ್ವವಿದ್ಯಾಲಯದ ವಿಜ್ಞಾನಿಗಳು ಡೈನೋಸಾರ್ ಹೆಜ್ಜೆಗುರುತನ್ನು ಪತ್ತೆ ಹಚ್ಚಿದ್ದಾರೆ.
ಫೋಕ್ಸ್ಟೋನ್ ರಚನೆ ಎಂದು ಕರೆಯಲ್ಪಡುವ ಸ್ತರಗಳಲ್ಲಿ ಡೈನೋಸಾರ್ ಹೆಜ್ಜೆಗುರುತುಗಳು ಕಂಡುಬಂದಿರುವುದು ಇದೇ ಮೊದಲು ಎಂದು ಹೇಳಲಾಗಿದೆ.