newsics.com
ಪ್ಯಾರಿಸ್: ವಿಶ್ವ ಅಥ್ಲೆಟಿಕ್ಸ್ ಆಡಳಿತ ಮಂಡಳಿಯ ಮಾಜಿ ಮುಖ್ಯಸ್ಥ ಲ್ಯಾಮೈನ್ ಡಿಯಾಕ್ ಅವರಿಗೆ ಫ್ರಾನ್ಸ್ ನ್ಯಾಯಾಲಯ ಎರಡು ವರ್ಷ ಜೈಲು ಶಿಕ್ಷೆ ವಿಧಿಸಿದೆ. ಅಲ್ಲದೆ, 500,000 ಯುರೋಗಳಷ್ಟು ದಂಡವನ್ನು ನ್ಯಾಯಾಲಯ ವಿಧಿಸಿದೆ.
ರಷ್ಯಾದ ಡೋಪಿಂಗ್ ಹಗರಣದಲ್ಲಿ ಭ್ರಷ್ಟಾಚಾರದ ಆರೋಪ ಹೊತ್ತಿರುವ ಹಿನ್ನೆಲೆಯಲ್ಲಿ ಬುಧವಾರ 87 ವರ್ಷದ ಡಿಯಾಕ್ ಅವರಿಗೆ ಫ್ರಾನ್ಸ್ ನ್ಯಾಯಾಲಯ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ನ್ಯಾಯಾಲಯವು ಡಿಯಾಕ್ಗೆ ನಾಲ್ಕು ವರ್ಷಗಳ ಜೈಲು ಶಿಕ್ಷೆ ವಿಧಿಸಿತು. ಅದರಲ್ಲಿ ಎರಡು ವರ್ಷಗಳನ್ನು ಅಮಾನತುಗೊಳಿಸಲಾಗಿದೆ.
ಡ್ರಗ್ಸ್ ಸೇವನೆ ಆರೋಪ ಹೊತ್ತಿರುವ ಕ್ರೀಡಾಪಟುಗಳಿಂದ ಡಿಯಾಕ್ ಒಟ್ಟು 3.45 ಮಿಲಿಯನ್ ಯುರೋಗಳಷ್ಟು ಲಂಚ ಪಡೆದಿದ್ದಾರೆಂದು ಆರೋಪಿಸಲಾಗಿದೆ. ಪರೀಕ್ಷಾ ಫಲಿತಾಂಶಗಳನ್ನು ಮುಚ್ಚಿಹಾಕಲು ಶಂಕಿತ ಡೋಪಿಂಗ್ ಕ್ರೀಡಾಪಟುಗಳಿಂದ ಲಂಚ ಸ್ವೀಕರಿಸಿದ್ದಾರೆ ಮತ್ತು ಅವರಿಗೆ 2012ರ ಲಂಡನ್ ಒಲಿಂಪಿಕ್ಸ್ ಸೇರಿದಂತೆ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಲು ಅವಕಾಶ ಮಾಡಿಕೊಟ್ಟಿದ್ದಾರೆಂದು ದೂರಲಾಗಿದೆ.
ಡಿಯಾಕ್ ಲಂಚ ಪಡೆದು 2012ರ ಸೆನೆಗಲ್ ಅಧ್ಯಕ್ಷೀಯ ಚುನಾವಣೆಯ ಮ್ಯಾಕಿ ಸಾಲ್ ಅವರ ಅಭಿಯಾನಕ್ಕೆ ಹಣಕಾಸಿನ ನೆರವು ನೀಡಿದ್ದರು ಎಂದೂ ಆರೋಪಿಸಲಾಗಿದೆ. ಡಿಯಾಕ್ 1999ರಿಂದ 2015 ರವರೆಗೆ ಇಂಟರ್ನ್ಯಾಷನಲ್ ಅಸೋಸಿಯೇಷನ್ ಆಫ್ ಅಥ್ಲೆಟಿಕ್ಸ್ ಫೆಡರೇಷನ್ಸ್ (ಐಎಎಎಫ್)ನ್ನು ಮುನ್ನಡೆಸಿದ್ದರು. ಐಎಎಎಫ್ನ್ನು ಈಗ ವಿಶ್ವ ಅಥ್ಲೆಟಿಕ್ಸ್ ಎನ್ನಲಾಗುತ್ತದೆ.
ಮರದ ಜತೆ ವಿವಾಹ; ಮೊದಲ ವಾರ್ಷಿಕೋತ್ಸವ
ಎರಡೂ ಕೈನಲ್ಲಿ ಬರೆವ ಸಾಧಕಿ…