newsics.com
ಲಂಡನ್: ಬ್ರಿಟನ್ ನಲ್ಲಿ ವಾರದಲ್ಲಿ ನಾಲ್ಕು ದಿನ ಕೆಲಸ ಎಂಬ ಅಭಿಯಾನ ಜನಪ್ರಿಯವಾಗುತ್ತಿದೆ. ಈಗಾಗಲೇ ನೂರಕ್ಕೂ ಹೆಚ್ಚು ಸಂಸ್ಥೆಗಳು ಇದಕ್ಕೆ ಕೈ ಜೋಡಿಸಿವೆ. ಈ ಹಿಂದೆ ಅನುಸರಿಸಲಾಗುತ್ತಿದ್ದ ವಾರದಲ್ಲಿ ಐದು ದಿನ ಕೆಲಸದ ಬದಲಾಗಿ ನಾಲ್ಕು ದಿನ ಕೆಲಸ ಎಂಬ ಹೊಸ ನೀತಿ ಜಾರಿಗೆ ಸಂಸ್ಥೆಗಳು ಆಸಕ್ತಿ ವಹಿಸಿವೆ.
ಐದು ದಿನ ಕೆಲಸ ಈ ಹಿಂದಿನ ಹಳೆಯ ಆರ್ಥಿಕತೆಯ ಭಾಗ ಎಂದು ಕೆಲವರು ಗೊಣಗುತ್ತಿದ್ದಾರೆ. ನಾಲ್ಕು ದಿನ ಕೆಲಸ ಮಾಡಿದರೂ ತಿಂಗಳ ಸಂಬಳದಲ್ಲಿ ಕಡಿತ ಮಾಡಿಲ್ಲ. ಪೂರ್ತಿ ಸಂಬಳ ಸಿಬ್ಬಂದಿಗೆ ದೊರೆಯಲಿದೆ.
ಸುಮಾರು 2600 ಸಿಬ್ಬಂದಿಗೆ ಇದೀಗ ವಾರದಲ್ಲಿ ನಾಲ್ಕು ದಿನ ಕೆಲಸದ ಸೌಲಭ್ಯ ದೊರೆಯಲಿದೆ. ಮುಂದಿನ ದಿನಗಳಲ್ಲಿ ಇದು ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ